ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಸೇಡಂ,
ಭಾರತ್ ವಿಕಾಸ ಸಂಗಮ – ವಿಕಾಸ್ ಅಕಾಡೆಮಿ, ಕಲಬುರಗಿ
ಭಾರತೀಯ ಸಂಸ್ಕೃತಿ ಉತ್ಸವ 7 * ಶ್ರೀ ಕೊತ್ತಲ ಸ್ವರ್ಣ ಜಯಂತೋತ್ಸವ
ಕಲ್ಯಾಣ ಕರ್ನಾಟಕ ಪರಿವಾರ ಮಿಲನ
ಭಾರತ್ ವಿಕಾಸ ಸಂಗಮದ ಏಳನೇ ಭಾರತೀಯ ಸಂಸ್ಕೃತಿ ಉತ್ಸವ ಮತ್ತು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸೇಡಂ ಸ್ವರ್ಣ ಜಯಂತೋತ್ಸವ 2025 ರಲ್ಲಿ ಆಯೋಜಿಸಲಾಗುವುದು. ಇದರ ಅಂಗವಾಗಿ ಸಮಗ್ರ ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಸಮರ್ಪಿತವಾದ ವಿಕಾಸ್ ಅಕಾಡೆಮಿ ವತಿಯಿಂದ ಕಲ್ಯಾಣ ಕರ್ನಾಟಕ ಪರಿವಾರ ಮಿಲನ ಕಾರ್ಯಕ್ರಮವು ಬಸವಕಲ್ಯಾಣದಲ್ಲಿ ದಿನಾಂಕ 3.12.2023 ರವಿವಾರದಂದು ಪ್ರತಃ 9:00 ರಿಂದ ಸಂಜೆ 5:00 ರ ವರೆಗೆ ನಡೆಯಲಿದೆ.
ಸಮಗ್ರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಆಸಕ್ತಿ ಇರುವ ಎಲ್ಲರೂ ಯುವಕ ಸಂಘಗಳು, ಮಹಿಳಾ ಮಂಡಳಿಗಳು, ಭಜನಾ ಮಂಡಳಿ ಇತ್ಯಾದಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕೆಂಬುದು ನಮ್ಮ ಆಶಯ. 2025 ರಲ್ಲಿ ನಡೆಯುವ ಕಾರ್ಯಕ್ರಮದ ಪರಿಚಯ ಮತ್ತು ಮುಂದಿನ ಯೋಜನೆ ಕುರಿತು ಅವಲೋಕನ ನಡೆಯುವುದು. ಇಂದಿನಿಂದಲೇ ಶಕ್ತಿಯನ್ನು ಒಗ್ಗೂಡಿಸಿದ ಸಮಗ್ರ ಕಲ್ಯಾಣ ಕರ್ನಾಟಕದ ಎಲ್ಲಾ ಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಒಳಗೊಂಡು ಸರ್ವರು (ಸಮಗ್ರ ಪರಿವಾರ ಸಹಿತ ) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿನಂತಿಸುತ್ತೇವೆ. ಇದರ ಸಫಲತೆಗಾಗಿ ನಮ್ಮ ವಿಕಾಸ್ ಅಕಾಡೆಮಿಯ ಜಿಲ್ಲಾ ಹಾಗೂ ತಾಲೂಕು ಸಂಚಾಲಕರು ತಮಗೆ ಸಹಕರಿಸುವರು.
ಇಂತಿ ತಮ್ಮ
ಶ್ರೀ ರೇವಣಸಿದ್ದಪ್ಪ ಜಲದೆ 944842 2734
ಪ್ರಬಂಧ ಪ್ರಮುಖರು
ಶ್ರೀ ಮಾರ್ಥಾಂಡ ಶಾಸ್ತ್ರಿ 9448449765
ವಿಶ್ವಸ್ಥರು ವಿಕಾಸ್ ಅಕಾಡೆಮಿ
ಕಲಬುರ್ಗಿ