ವಿವೇಕ ಸಾಹಿತ್ಯ ಭಂಡಾರ
1999ರಲ್ಲಿ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪರಿಸರದಲ್ಲಿ ಉತ್ತಮ ಸಾಹಿತ್ಯ ಕೃತಿಗಳನ್ನು ಯೋಗ್ಯ ದರದಲ್ಲಿ ಮಾರಾಟ ಮಾಡುವುದಕ್ಕಾಗಿ ವಿವೇಕ ಸಾಹಿತ್ಯ ಭಂಡಾರವನ್ನು ಆರಂಭಿಸಲಾಯಿತು. ಇದರ ಉದ್ದೇಶ ಉತ್ತಮ ವಿಚಾರಗಳ ಪ್ರಚಾರ. ಸಂಸ್ಥೆಯ ಬೆಳ್ಳಿ ಹಬ್ಬದ ಸಂಭ್ರಮದ ಸಂದರ್ಭದಲ್ಲಿ ವಿವಿಧ ಲೇಖಕರಿಂದ ಏಕಕಾಲಕ್ಕೆ 50 ಕೃತಿಯನ್ನು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಪ್ರಕಾಶನದ ಮುಖಾಂತರ ಪ್ರಕಟಿಸಲಾಯಿತು. ತದನಂತರದಲ್ಲಿಯೂ ಕೂಡ ಪುಸ್ತಕ ಪ್ರಕಟಣೆ ಕೆಲಸ ನಡೆದಿದೆ.
ಈಗಾಗಲೇ ವಿವೇಕ ಸಾಹಿತ್ಯ ಭಂಡಾರದ ಮುಖಾಂತರ ಸುಮಾರು 18 ರಷ್ಟು ಪ್ರಕಾಶಕರ 10 ಕೋಟಿಯ ರೂಪಾಯಿಗಳಷ್ಟು ಉತ್ತಮ ಸಾಹಿತ್ಯ ಮಾರಾಟ ಮಾಡಲಾಗಿದೆ.
ಪ್ರಕಾಶನಗಳು:
ರಾಷ್ಟ್ರೋತ್ಥಾನ ಪ್ರಕಾಶನ,
ಜ್ಞಾನ ಯೋಗಶ್ರಮ ವಿಜಯಪುರ,
ರಾಮಕೃಷ್ಣ ಆಶ್ರಮ ಯಾದವಗಿರಿ ಮೈಸೂರು ,
ಗೋಪುರ ಪ್ರಕಾಶನ ಉತ್ತರ ಪ್ರದೇಶ್,
ಸ್ವರ್ಣ ಸಾಹಿತ್ಯ ಪ್ರಕಾಶನ ಸೇಡಂ,
ಭಾರತ್ ವಿಕಾಸ ಸಂಗಮ,
ಸಾಕ್ಷಿ ಪ್ರಕಾಶನ ಬೆಂಗಳೂರು,
ಹಾಗೂ ಇತರೆ ಪ್ರಮುಖ ಸ್ಥಳೀಯ ಪ್ರಕಾಶನಗಳು.