Select Page

Matruchaya High School

 

ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯು ಶಾಲೆಯ ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಬೇಕೆಂಬ ಹೆಬ್ಬೇಕೆಯಿಂದ 1981-82ರ ಸಾಲಿನಲ್ಲಿ ಕೆಲವೇ ಮಕ್ಕಳಿಂದ ಶಾಲೆ ಆರಂಭಿಸಲಾಯಿತು. ಶಾಲೆಗೆ ಭೂ ದಾನಿಗಳಾದ ತಪ್ಪಡಿಯ ಪರಿವಾರದ ಹೆಸರಿನಲ್ಲಿ ಶ್ರೀಮತಿ ನಾಥಿಭಾಯಿ ಸೀತಾರಾಮ್ ಜೇಠಮಲ್ ತಾಪಾಡಿಯ ಮಾತೃಛಾಯ ಪ್ರೌಢಶಾಲೆ ಎಂದು ನಾಮಕರಣ ಮಾಡಲಾಯಿತು. ಮೊದಲು ಹೆಣ್ಣು  ಶಾಲೆಯ ಪ್ರಾರಂಭಿಸಿತು ಆದ್ದರಿಂದ ಮಾತೃಛಾಯ ಎಂದರೆ ತಾಯಿಯ ನೆರಳು ಎಂದು ಹೆಸರಿಸಲಾಯಿತು. ಮುಂದೆ ಸಹ ಶಿಕ್ಷಣ  ( co-education) ಪ್ರಾರಂಭಿಸಲಾಯಿತು. ಈ ಶಾಲೆಯಲ್ಲಿ ಇವರಿಗೆ 10ನೇ ವರ್ಗದ 5420 ವಿದ್ಯಾರ್ಥಿಗಳು ಅಧ್ಯಯನ ಮಾಡಿದ್ದಾರೆ. ಮತ್ತು 167 ಸೇವಾ ಬಳಗ ಕಾರ್ಯನಿರ್ವಹಿಸಿದೆ. ಈ ಶಾಲೆಯ ಭೂಮಿ ಪೂಜೆಯನ್ನು ಪೂಜ್ಯಶ್ರೀ  ಶಿವಕುಮಾರ ಸ್ವಾಮಿಗಳು ಮಾಡಿದ್ದಾರೆ. ದಿನಾಂಕ 24 9 1987 ರಲ್ಲಿ ಸರ್ಕಾರದ ಅನುದಾನಕ್ಕೆ ಒಳಪಟ್ಟಿದೆ. 2006 – 07ರಲ್ಲಿ   ಬೆಳ್ಳಿ ಹಬ್ಬ ಆಚರಿಸಿಕೊಂಡಿದೆ.

ಈ ಶಾಲಾ ಪರಿಸರಕ್ಕೆ ಅನೇಕ ಗಣ್ಯ ವ್ಯಕ್ತಿಗಳ ಭೇಟಿ ನೀಡಿ ಮಾರ್ಗದರ್ಶನ ನೀಡಿದ್ದಾರೆ. ಪದ್ಮಶ್ರೀ ಭಟ್ನಗಾರ, ರಾಮನ್ ಪ್ರಶಸ್ತಿ ವಿಜೇತ, ಪ್ರೊ. ಜಿ. ಪದ್ಮನಾಭ, ಚಂದ್ರಶೇಖರ್ ಆಜಾದ್, ಅಶ್ವಥ್ ಉಲ್ಲಾ, ಇವರ ಅಖಾಡದಲ್ಲಿ ಬೆಳೆದ ಶ್ರೇಷ್ಠ ಕ್ರಾಂತಿಕಾರಿ ಶ್ರೀ ಮನ್ಮಥನಾಥ ಗುಪ್ತ ಖ್ಯಾತ ಸಂಗೀತ ವಿದೋಷಿ , ಗಂಗೂಬಾಯಿ ಹಾನಗಲ್  ಮಾಜಿ ರಾಜ್ಯಪಾಲ ಮತ್ತು ನಿವೃತ್ತ ನ್ಯಾಯಮೂರ್ತಿ ಶ್ರೀರಾಮ್ ಜೋಯಿಸ್ ಶಿಕ್ಷಣ ಚಿಂತಕ, ಶ್ರೀ ಶ್ರೀ ರಾಮಣ್ಣ ಡಾ|| ಸ. ಜ ನಾಗಲೊಟಿಮಠ್, ಶ್ರೀ ವಿದ್ಯಾನಂದಶೆಣೈ ಖ್ಯಾತ ಚಿಂತಕ, ಶ್ರೀ ಕೆ ಎನ್ ಗೋವಿಂದಾಚಾರ್ಯ, ಪೂಜ್ಯಶ್ರೀ ಸಿದ್ದೇಶ್ವರ ಸ್ವಾಮಿಗಳು, ಶ್ರೀಮತಿ ಲಕ್ಷ್ಮಿ ಸಹಗಲ್, ಡಾ || ಗುರುರಾಜ್ ಕರ್ಜಗಿ, ಇನ್ಫೋಸಿಸ್ ಸಂಸ್ಥೆಯ ಶ್ರೀಮತಿ ಸುಧಾ ಮೂರ್ತಿ ಮುಂತಾದ ಮಹನೀಯರು ಮೇಟಿ ನೀಡಿದ್ದಾರೆ.

ಕಳೆದ 42 ವರ್ಷಗಳಿಂದ ಶಾಲೆಯು ತಾಲೂಕು ಜಿಲ್ಲಾ ಮತ್ತು ರಾಜ್ಯಾದ್ಯಂತ ತನ್ನ ಕ್ರಿಯಾಶೀಲ ಅರ್ಥಪೂರ್ಣ ಚಟುವಟಿಕೆಗಳಿಂದ ಜನಪ್ರಿಯವಾದ ಪಠ್ಯ ಬೋಧನೆ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ವಿಜ್ಞಾನ ಪ್ರದರ್ಶ, ಕ್ರೀಡೆ, ಸಾಹಿತ್ಯ, ಸಂಗೀತ, ಕಲೆ, ಪರಿಸರ ಸಂರಕ್ಷಣೆ, ಅಲ್ಲದೆ ಸಾಮಾಜಿಕ ಶೈಕ್ಷಣಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡು ಬಂದಿದೆ. ಈ ಶಾಲೆಯ ವಿದ್ಯಾರ್ಥಿಗಳು ವಿಜ್ಞಾನ ಪ್ರದರ್ಶನ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸ್ಕೃತವನ್ನು ಒಂದು ವಿಷಯವನ್ನಾಗಿ ಬೋಧಿಸಲಾಗುತ್ತಿದೆ.

ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ, ವಿಜ್ಞಾನ ವಸ್ತು ಪ್ರದರ್ಶನ, ವಿದ್ಯಾಭಾರತಿ ರಾಜಮಠದ ಶಿಶು ಸಂಗಮ, ವಿಜ್ಞಾನ ಗಣಿತ ಮೇಳ, ಮತ್ತು ಸಂಸ್ಕೃತ ಮಹೋತ್ಸವ ಮತ್ತು ಅನೇಕ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಕಾರ್ಯಗಾರಗಳು ನಡೆದಿದೆ.

ರಾಜ್ಯ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ನಮ್ಮ ವಿದ್ಯಾರ್ಥಿಗಳು ತನು ಮನ ಧನಗಳಿಂದ ಸ್ಪಂದಿಸಿದ್ದಾರೆ. ಇಲ್ಲಿ ಕಾರ್ಯನಿರ್ವಹಿಸುವ ಸೇವಾ ಬಳಗಕ್ಕೆ ಅನೇಕ ತಾಲೂಕ, ಜಿಲ್ಲಾ  ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳು ದೊರಕಿವೆ.

ಈಗ ಒಟ್ಟು 2023 24ರಲ್ಲಿ 8 ವರ್ಗಗಳನ್ನು ನಡೆಯುತ್ತಿದ್ದು ಪ್ರಸ್ತುತ ವರ್ಷದಲ್ಲಿ 334 ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಅಧ್ಯಯನ ಮಾಡುತ್ತಿದ್ದು 20 ಜನ ಸೇವಾ ಬಳಗ ಕಾರ್ಯನಿರ್ವಹಿಸುತ್ತಿದ್ದು ಈ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಡಾಕ್ಟರ್ ಇಂಜಿನಿಯರ್ ಸರ್ಕಾರಿ ಸೇವೆ ಶಿಕ್ಷಕರು ಮತ್ತು ರೈತರು ಹೀಗೆ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೆಸರು ಸೂಚಿಸಿದಂತೆ ಮಾತೃ ಛಾಯಾ ಅಂದರೆ ತಾಯಿ ನೆರಳು ಇಲ್ಲಿ ಅಧ್ಯಯನ ಮಾಡಿದ ಮಕ್ಕಳು ಸರ್ವಾಂಗೀಣ ವಿಕಾಸಕ್ಕಾಗಿ ತಾಯಿ ಮಮತೆಯ ಅಕ್ಕರೆ ವಾತ್ಸಲ್ಯಗಳನ್ನು ನೀಡುವುದರೊಂದಿಗೆ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಮಕ್ಕಳ ಮಾತೃ ಹೃದಯಗಳಾಗಿ ಆಸರೆ ಬಯಸಿ ಬಂದವರಿಗೆ ಮಾತೃತ್ವದ ಅಪ್ಪುಗೆಯಲ್ಲಿ ಆಶ್ರಯ ನೀಡಿ ಕಷ್ಟದಲ್ಲಿ ಇರುವವರಿಗೆ ಮಾತೆಯ ಮಮತೆಯ ಮಡಿಲಿನ ಆಶ್ರಯ  ಕೊಟ್ಟು ಅವರ ಜೀವನದಲ್ಲಿ ಭರವಸೆ ಮೂಡಿಸುವುದು ತನ್ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ನಾಗರಿಕರಾಗಬೇಕೆಂಬುದು ನಮ್ಮ ಮಾತೃಛಾಯ  ಪ್ರೌಢಶಾಲೆಯ ಉದ್ದೇಶ.