Select Page

Sri Shivakumar N Hugar Smruti , Sri Veerbhadreshwar Vidya Mandir Higher Primary School, Kolkunda Tq:Sedam

ಶ್ರೀ ವೀರಭದ್ರೇಶ್ವರನ ದಿವ್ಯ ಸಾನಿಧ್ಯದಲ್ಲಿ 1981 ರಲ್ಲಿ ಕೆಲವೇ ವಿದ್ಯಾರ್ಥಿಗಳಿಂದ ಹಾಗೂ ಶಿಕ್ಷಕರಿಂದ ಪ್ರಾರಂಭವಾದ ಶಿಶು ಮಂದಿರ 1984ರಲ್ಲಿ ಆದರಣೀಯ ಬಸವರಾಜ ಪಾಟೀಲ್‌ರವರು ಈ ಶಿಶುಮಂದಿರವನ್ನು ಶ್ರೀ ವೀರಭದ್ರೇಶ್ವರ ವಿದ್ಯಾಮಂದಿರಕನ್ನಡ ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಶಿಕ್ಷಣ ಇಲಾಖೆಯ ಅನುಮತಿ ಪಡೆದು ಅಧಿಕೃತವಾಗಿ ಪ್ರಾರಂಭಿಸಿದರು.
ಆರAಭದಲ್ಲಿಕೋಲ್ಕುAಧಾದ ವಿದ್ಯಾರ್ಥಿಗಳಿಗೆ ಸೀಮಿತವಾದ ಶಾಲೆಯುತನ್ನ ಭೋದನಾಕೌಶಲ್ಯತೆಯಿಂದ ಸುತ್ತಲಿನ ಗ್ರಾಮಗಳಾದ ಹಂದರಕಿ, ನಾಚವಾರ, ಮುಗನೂರ, ದೇವನೂರು, ಗುಂಡಳ್ಳಿ, ತುನ್ನೂರು, ಕೋನಾಪೂರ, ರಾಘಾಪೂರ ಅಲ್ಲದೇ ತಾಂಡಗಳ ವಿದ್ಯಾರ್ಥಿಗಳನ್ನು ಆಕರ್ಷಿಸಲ್ಪಟ್ಟು ವೃಕ್ಷವಾಗಿ ಬೆಳೆಯತೊಡಗಿತು.
ಶಿಕ್ಷಣದ ಅನಿವಾರ್ಯತೆಯನ್ನು ಅರಿತು ಗ್ರಾಮದ ಹಿರಿಯ ಮುತ್ತದ್ದಗಳಿಂದ ದೇವಾಲಯದ ಮುಂಭಾಗದ ಆವರಣದಲ್ಲಿ ಕಟ್ಟಡದ ವ್ಯವಸ್ಥೆಯನ್ನು ಮಾಡಲ್ಪಟ್ಟಿತು.
1990-91ರಲ್ಲಿ ಈ ಶಾಲೆಯಿಂದ ಪ್ರಥಮ ಬಾರಿ ಏಳನೆಯ ತರಗತಿಯ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದರುಇಲ್ಲಿಯವರೆಗೆ 27 ತಂಡಗಳು ಏಳನೆಯ ತರಗತಿಯನ್ನುತೇರ್ಗಡೆ ಹೊಂದಿರುತ್ತದೆ.
ಈ ಶಾಲೆಯ ಸ್ವತಂತ್ರ ನೂತನಕಟ್ಟಡವುದೇವಾಲಯದ ಹಿಂಬದಿಯಲ್ಲಿ 28ನೇಯ ಮಾರ್ಚ2003ರಲ್ಲಿ ಮಾನ್ಯ ಬಸವರಾಜ ಪಾಟೀಲ ಯತ್ನಾಳ್ ಮಾಜಿ ಕೇಂದ್ರ ಸಚಿವರು ಹಾಗೂ ಶ್ರೀ ಬಸವಂತರೆಡ್ಡಿ ಮಾಜಿ ಶಾಸಕರಿಂದ ಉದ್ಘಾಟನೆಗೊಂಡಿತು. ಸಿದ್ದಣ್ಣಗೌಡ, ವೀರಣ್ಣ ಅರಳಿ ಮತ್ತು ವಿಠ್ಠಲ್‌ರೆಡ್ಡಿ ಪಾಟೀಲ ಇವರ ಜೊತೆ ಅನೇಕ ಹಿರಿಯರು ಸಹಕರಿಸಿದರು.
2004ರಲ್ಲಿ ರಾಮಕೃಷ್ಣ ಆಶ್ರಮ ವಿಜಯಪೂರದ ಪ್ರಖರ ವಾಗ್ಮಿಗಳಾದ ಶ್ರೀ ನಿರ್ಭಯಾನಂದಜಿ ಯವರು ಒಂದು ದಿನದ ಪ್ರವಚನ ಕಾರ್ಯಕ್ರಮ ಕೊಡಮಾಡಿದರು. ಈ ಶಾಲೆಯಲ್ಲಿ ಪ್ರತ್ಯೆಕವಾಗಿ ಗಣಕಯಂತ್ರದ ಶಿಕ್ಷಣವನ್ನು 2004ರಲ್ಲಿ ಕೊಡಮಾಡಲು ಆರಂಭಿಸಲಾಯಿತು.
ಈ ಶಾಲೆಯ ಮುಂದುವರಿದ ಭಾಗದಂತೆ ಪ್ರೌಢ ವಿಭಾಗದ ಶಿಕ್ಷಣ ಸೇವೆಯನ್ನುಗೈಯಲು 2006-07ನೆಯ ಶೈಕ್ಷಣಿಕ ಸಾಲಿನಲ್ಲಿ ಶ್ರೀ ಕೊತ್ತಲ ಬಸವೇಶ್ವರ ಹೆಸರಿನೊಂದಿಗೆ ಪ್ರೌಢಶಾಲೆಯನ್ನುಆರಂಭಿಸಲಾಯಿತು.
2008ರಲ್ಲಿ ಕುದ್ರೋಳ್ಳಿ ಗಣೇಶ ತಮ್ಮ ಅದ್ಭುತಜಾದೂ ಪ್ರದರ್ಶಿಸಿದರು.ಶ್ರೀ ವೀರಭದ್ರೇಶ್ವರ ವಿದ್ಯಾಮಂದಿರ ಶಾಲೆಯು 2008ರಲ್ಲಿ 25ವರ್ಷಗಳನ್ನು ಯಶಸ್ವಿಯಾಗಿ ಪೋರೈಸಿಕೊಂಡು ಸಂಭ್ರಮದ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡಿತು.
2010 ರಲ್ಲಿ ಶ್ರೀ ರಾಮ ಭಕ್ತನಾದ ಹನುಮಂತನ ಜನ್ಮ ಸ್ಥಳವಾದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಕಿಷ್ಕಿಂಧಕ್ಕೆ ಪ್ರವಾಸ.
2010ರಲ್ಲಿ ನಾಡುಕಂಡ ಅದ್ಭುತವಾದ ಕಾರ್ಯಕ್ರಮ ಕಲಬುರಗಿ ಕಂಪು ಶಾಲೆಯ ವಿದ್ಯಾರ್ಥಿಗಳು,ಶಿಕ್ಷಕರು ಭಾಗಿಯಾಗಿ ಪ್ರೇರಣೆ ಪಡೆದರು.
ಶ್ರೀ ಕೊತ್ತಲ ಬಸವೇಶ್ವರ ಪ್ರೌಢಶಾಲೆಯಿಂದ ಇಲ್ಲಿಯವರೆಗೆ 10ನೇಯ ತರಗತಿಯ 08 ತಂಡಗಳು ತೆರ್ಗಡೆ ಹೊಂದಿರುತ್ತವೆ.ಏಪ್ರೀಲ್ 2012ರ ಎಸ್ಸ್ಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡ 100ರಷ್ಟು ಫಲಿತಾಂಶ ಪಡೆದು ಶಿಕ್ಷಣ ಇಲಾಖೆಯಿಂದಅಭಿನAದನೆಗೆ ಪಾತ್ರವಾಗಿದೆ.
ಪ್ರೌಢ ವಿಭಾಗದ ವಿದ್ಯಾರ್ಥಿಗಳಿಗೆ 2013ರಲ್ಲಿ ಭಾರತದ ಪವಿತ್ರ ಕ್ಷೇತ್ರದಲ್ಲಿವೊಂದಾದ.ಸ್ವಾಮಿ ವಿವೇಕಾನಂದರಿಗೆ ಜಗತ್ ಕಲ್ಯಾಣದ ಪ್ರಚೋದನೆಯನ್ನು ಕೊಡಮಾಡಿದತ ಪೋಭೂಮಿಯಾದ ಕನ್ಯಾಕುಮಾರಿ ಮತ್ತು 2014ರಲ್ಲಿ ಭಾರತ ವಿಕಾಸ ಸಂಗಮ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಹಾರಾಷ್ಟçದ ಕನ್ಹೇರಿಯ ಕಾಡಸಿದ್ದೇಶ್ವರ ಆಶ್ರಮದವರೆಗೆ ಪ್ರವಾಸಮಾಡಲಾಗಿದೆ.
ವಿದ್ಯಾಭಾರತಿ ಆಯೋಜಿತ ಪ್ರಾಂತ ಮಟ್ಟದ ಖೋ-ಖೋ ಪಂದ್ಯಾಟಗಳಲ್ಲಿ (ಬೀದರ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮತ್ತು ಕಲ್ಲಡ್ಕ)ಕಳೆದ ಮೂರು ವರ್ಷಗಳಿಂದ ಪ್ರೌಢ ವಿಭಾಗದ ವಿದ್ಯಾರ್ಥಿಗಳು ದ್ವೀತಿಯ ಸ್ಥಾನ ಪಡೆದಿರುತ್ತಾರೆ.
ಕಲಬುರಗಿಯಲ್ಲಿ ಕಳೆದ ಡಿಸೆಂಬರ 2016ರಲ್ಲಿ ಜರುಗಿದ ಕಲ್ಯಾಣ ಕರ್ನಾಟಕ ವಿಕಾಸ ಜಾತ್ರೆಯಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಸರ್ವ ಸೇವಾಬಳಗದವರು ಭಾಗವಹಿಸಿ. ಶ್ರೀ ಸಿದ್ದೇಶ್ವರ ಸ್ವಾಮಿಗಳು, ಶ್ರೀ ಕಾಡಸಿದ್ದೇಶ್ವರ ಸ್ವಾಮಿಗಳು ಶ್ರೀ ಗವಿಸಿದ್ದಲಿಂಗೇಶ್ವರ ಸ್ವಾಮಿಗಳು, ಹಿರಿಯ ಶರಣ ಸಾಹಿತಿಗಳಾದ ಆದರಣೀಯ ಗೂರುರು ಚೆನ್ನಬಸಪ್ಪ, ಶಿಕ್ಷಣ ತಜ್ಞರಾದ ಆದರಣೀಯ ಗುರುರಾಜ ಕರ್ಜಗಿ, ಖ್ಯಾತ ವಾಗ್ಮಿಗಳಾದ ಸುಲಿಬೆಲೆ ಚಕ್ರವರ್ತಿಯವರ ಅಮೃತದ ಹಿತ ನುಡಿಗಳನ್ನು ಕೇಳಿ ಪ್ರೇರಿತರಾಗಿರುವವರು 1983ರಲ್ಲಿ ಅಂಕುರಿಸಿದ ಶಾಲೆಯು, 2025ರಲ್ಲಿ ಜರುಗುವ ಸಂಸ್ಥೆಯ ಸ್ವರ್ಣ ಮಹೋತ್ಸವಕ್ಕೆಅಣಿಯಾಗುತ್ತಿದೆ.