ಶ್ರೀಮತಿ ನರ್ಮದಾ ದೇವಿ ಗಿಲಡಾ ಕನ್ಯಾ ಪ್ರೌಢಶಾಲೆ ಸೇಡಮ್
ರಾಜ್ಯದ ಗಡಿ ತಾಲೂಕಿನಲ್ಲಿ ಮಹಿಳಾ ಸಾಕ್ಷರತೆಯನ್ನು ಹೆಚ್ಚಿಸುವ ಸಂಕಲ್ಪ ದೊಂದಿಗೆ 2002 ಶೈಕ್ಷಣಿಕ ವರ್ಷದಿಂದ ಪ್ರಾರಂಭಗೊಂಡು ಈ ಭಾಗದಲ್ಲಿ ಮಹಿಳಾ ಸಾಕ್ಷರತೆಯನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಮಹಿಳಾ ಸ್ವಾವಲಂಬನೆ ಸಾಧಿಸುವ ಸಂಕಲ್ಪ ಹೊಂದಿದೆ.
ಮಕ್ಕಳಲ್ಲಿ ಜೀವನ ಮೌಲ್ಯಗಳು ಮತ್ತು ಕೌಶಲ್ಯಗಳನ್ನು ಕಲಿಸುವುದರ ಜೊತೆಗೆ, ಸ್ವಾಭಿಮಾನಿ ಬದುಕು ಸಾಗಿಸುವುದು ಹೇಗೆ ಎನ್ನುವುದನ್ನು ಕಲಿಸಿಕೊಡಲಾಗುತ್ತಿದೆ.
ಮಕ್ಕಳಲ್ಲಿ ಕ್ರೀಡಾ ಮನೋಭಾವನೆಯನ್ನು ಹೆಚ್ಚಿಸುವುದಕ್ಕಾಗಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಹಾಗೆಯೇ ಸ್ಪರ್ಧಾ ಮನೋಭಾವನೆಯನ್ನು ಹೆಚ್ಚಿಸುವುದಕ್ಕಾಗಿ ಹಲವಾರು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.
ಇಲಾಖೆ ಮತ್ತು ವಿದ್ಯಾಭ್ಯಾಸ ಆಯೋಜಿಸುವ ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳನ್ನು ಭಾಗವಹಿಸುವಂತೆ ಪ್ರೇರೇಪಿಸಲಾಗುತ್ತಿದೆ.
ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗುವಂತೆ ಸ್ವಸಜ್ಜಿತವಾದ ಕಟ್ಟದ, ವಾಚನಾಲಯ, ಮಕ್ಕಳ ಅನುಪಾತಕ್ಕೆ ತಕ್ಕಂತೆ ಕಂಪ್ಯೂಟರ್ ಲ್ಯಾಬ್ , ವಿಶಾಲವಾದ ಆಟದ ಮೈದಾನ ಹಾಗೂ ತಮ್ಮ ಶೈಕ್ಷಣಿಕ ಪರಿಸರವನ್ನು ನಿರ್ಮಾಣ ಮಾಡಲಾಗುತ್ತಿದೆ.