Sri Kothala Basaveshwar High School, Kolkunda Tq:Sedam Dist:Kalaburgi
“ಶಾಲೆಯೆಂದು ಸಾಮಾಜಿಕ ಪರಿವರ್ತನೆಯ ಕೇಂದ್ರ” ಸತ್ವಶಾಲಿ ಮತ್ತು ಶಕ್ತಿಶಾಲಿ ವ್ಯಕ್ತಿತ್ವವನ್ನು ಹೊಂದಿರುವ ನಾಗರಿಕರನ್ನು ಸಮಾಜಕ್ಕೆ ಅರ್ಪಿಸುವುದು ಈ ಸಂಸ್ಥೆಯ ಮತ್ತು ಶಾಲೆಯ ಮುಖ್ಯ ಉದ್ದೇಶವಾಗಿದೆ. ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮನುಷ್ಯನ ಬದುಕಿಗೆ ಬೇಕಾದ ಮೌಲ್ಯಾಧಾರಿತ ಶಿಕ್ಷಣ ಕೊಡುವುದು ಮೂಲ ಉದ್ದೇಶವಾಗಿದೆ
ಶ್ರೀ ಕೊತ್ತಲ ಬಸವೇಶ್ವರ ಪ್ರೌಢಶಾಲೆಯಿಂದ ಇಲ್ಲಿಯವರೆಗೆ 10ನೇಯ ತರಗತಿಯ 08 ತಂಡಗಳು ತೆರ್ಗಡೆ ಹೊಂದಿರುತ್ತವೆ.ಏಪ್ರೀಲ್ 2012ರ ಎಸ್ಸ್ಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡ 100ರಷ್ಟು ಫಲಿತಾಂಶ ಪಡೆದು ಶಿಕ್ಷಣ ಇಲಾಖೆಯಿಂದಅಭಿನAದನೆಗೆ ಪಾತ್ರವಾಗಿದೆ.
ಪ್ರೌಢ ವಿಭಾಗದ ವಿದ್ಯಾರ್ಥಿಗಳಿಗೆ 2013ರಲ್ಲಿ ಭಾರತದ ಪವಿತ್ರ ಕ್ಷೇತ್ರದಲ್ಲಿವೊಂದಾದ.ಸ್ವಾಮಿ ವಿವೇಕಾನಂದರಿಗೆ ಜಗತ್ ಕಲ್ಯಾಣದ ಪ್ರಚೋದನೆಯನ್ನು ಕೊಡಮಾಡಿದತ ಪೋಭೂಮಿಯಾದ ಕನ್ಯಾಕುಮಾರಿ ಮತ್ತು 2014ರಲ್ಲಿ ಭಾರತ ವಿಕಾಸ ಸಂಗಮ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಹಾರಾಷ್ಟçದ ಕನ್ಹೇರಿಯ ಕಾಡಸಿದ್ದೇಶ್ವರ ಆಶ್ರಮದವರೆಗೆ ಪ್ರವಾಸಮಾಡಲಾಗಿದೆ.
ವಿದ್ಯಾಭಾರತಿ ಆಯೋಜಿತ ಪ್ರಾಂತ ಮಟ್ಟದ ಖೋ-ಖೋ ಪಂದ್ಯಾಟಗಳಲ್ಲಿ (ಬೀದರ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮತ್ತು ಕಲ್ಲಡ್ಕ)ಕಳೆದ ಮೂರು ವರ್ಷಗಳಿಂದ ಪ್ರೌಢ ವಿಭಾಗದ ವಿದ್ಯಾರ್ಥಿಗಳು ದ್ವೀತಿಯ ಸ್ಥಾನ ಪಡೆದಿರುತ್ತಾರೆ.
ಕಲಬುರಗಿಯಲ್ಲಿ ಕಳೆದ ಡಿಸೆಂಬರ 2016ರಲ್ಲಿ ಜರುಗಿದ ಕಲ್ಯಾಣ ಕರ್ನಾಟಕ ವಿಕಾಸ ಜಾತ್ರೆಯಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಸರ್ವ ಸೇವಾಬಳಗದವರು ಭಾಗವಹಿಸಿ. ಶ್ರೀ ಸಿದ್ದೇಶ್ವರ ಸ್ವಾಮಿಗಳು, ಶ್ರೀ ಕಾಡಸಿದ್ದೇಶ್ವರ ಸ್ವಾಮಿಗಳು ಶ್ರೀ ಗವಿಸಿದ್ದಲಿಂಗೇಶ್ವರ ಸ್ವಾಮಿಗಳು, ಹಿರಿಯ ಶರಣ ಸಾಹಿತಿಗಳಾದ ಆದರಣೀಯ ಗೂರುರು ಚೆನ್ನಬಸಪ್ಪ, ಶಿಕ್ಷಣ ತಜ್ಞರಾದ ಆದರಣೀಯ ಗುರುರಾಜ ಕರ್ಜಗಿ, ಖ್ಯಾತ ವಾಗ್ಮಿಗಳಾದ ಸುಲಿಬೆಲೆ ಚಕ್ರವರ್ತಿಯವರ ಅಮೃತದ ಹಿತ ನುಡಿಗಳನ್ನು ಕೇಳಿ ಪ್ರೇರಿತರಾಗಿರುವವರು 1983ರಲ್ಲಿ ಅಂಕುರಿಸಿದ ಶಾಲೆಯು, 2025ರಲ್ಲಿ ಜರುಗುವ ಸಂಸ್ಥೆಯ ಸ್ವರ್ಣ ಮಹೋತ್ಸವಕ್ಕೆಅಣಿಯಾಗುತ್ತಿದೆ.