Matru Mandir Higher School Chincholi Dist: Kalaburgi
ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ಸಂಚಾಲಿತಾ ಮಾತೃ ಮಂದಿರ ಪ್ರೌಢಶಾಲೆ ಚಿಂಚೋಳಿ
ಶಾಲೆಯ ಸಂಕ್ಷಿಪ್ತ ಮಾಹಿತಿ: ನಮ್ಮ ಶಾಲೆಯು ಎಲ್ಲಾ ಮೂಲ ಸೌಕರ್ಯಗಳನ್ನು ಒಳಗೊಂಡಿದ್ದು. ಉತ್ತಮವಾದ ಪರಿಸರದಲ್ಲಿ ಶಾಲಾ ಚಟುವಟಿಕೆಗಳು ನಡೆಯುತ್ತಿವೆ. ಶಾಲೆಯು ಚಿಂಚೋಳಿ ಪಟ್ಟಣದಿಂದ ಸುಮಾರು ಒಂದುವರೆ ಕಿಲೋಮೀಟರ್ ದೂರದಲ್ಲಿದ್ದು ಯಾವುದೇ ತರಹದ ವಾಯುಮಾಲಿನ್ಯ, ಶಬ್ದ ಮಾಲಿನ್ಯ ವಿರದ ಹಸಿರು ತುಂಬಿದ ಗಿಡಮರ ಪರಿಸರದಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಂಸ್ಕೃತಿಕ ಸಂಘದ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಸ್ಮಾರ್ಟ್ ಕ್ಲಾಸ್ ದೊರೆತಿದೆ. ಹಾಗೂ ಕಂಪ್ಯೂಟರ್ ವ್ಯವಸ್ಥೆಯು ಒಳಗೊಂಡಿದೆ.
ಶಾಲೆಯು ಪ್ರಾರಂಭವಾದ ವರ್ಷ : ಮಾತೃ ಮಂದಿರ ಪ್ರೌಢಶಾಲೆಯು 1991 92 ರಲ್ಲಿ ಕೇವಲ 23 ಮಕ್ಕಳಿಂದ ಪ್ರಾರಂಭಗೊಂಡು. ಇದೀಗ ವಾರ್ಷಿಕವಾಗಿ 200 ಮಕ್ಕಳವರೆಗೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿಕೊಂಡಿದೆ. ಈ ಶಾಲೆಯಲ್ಲಿ ಇಲ್ಲಿಯವರೆಗೂ ಅಂದಾಜು ನಾಲ್ಕು ಸಾವಿರ ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡಿದ್ದಾರೆ.
ಶಾಲೆಯ ಉದ್ದೇಶ ಮತ್ತು ಗುರಿ : ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವುದು ಮಾತ್ರವಲ್ಲದೆ ಶಿಸ್ತು, ಸಂಯಮ, ಮಕ್ಕಳಲ್ಲಿ ದೇಶಭಕ್ತಿ ಮೂಡಿಸಿ, ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಕೇವಲ ಅಧಿಕಾರ, ಹಣ, ಹುದ್ದೆಯ ಹಿಂದೆ ಹೋಗದೆ ನಿಸ್ವಾರ್ಥ ಕೆಲಸ ಮಕ್ಕಳನ್ನು ಆಣಿನಿಗೊಳಿಸಬೇಕಾಗಿದೆ. ಇಂದಿನ ದಿನಗಳಲ್ಲಿ ಶಿಕ್ಷಣ ಎಂಬುದು ಒಂದು ವ್ಯಾಪಾರದ ರೀತಿ ಮಾರ್ಪಟ್ಟಿದೆ. ವಿದ್ಯಾಸಂಸ್ಥೆಗಳು ತಮ್ಮ ಹೆಸರು ಹಣಗಳಿಸಲು ಮಕ್ಕಳನ್ನು ಶಾಲೆಯ ಬಾಹ್ಯ ಸೌಂದರ್ಯದ ಮೂಲಕ ಆಕರ್ಷಿಸಿ ಮಕ್ಕಳನ್ನು ಅಂಕಕ್ಕೆ ಮಾತ್ರ ಸೀಮಿತಗೊಳಿಸುತ್ತಿರುವುದು ದುಸ್ತರ, ಹಾಗೂ ಕಡು ಬಡುವರ ಮಕ್ಕಳು, ವಿದ್ಯಾಭ್ಯಾಸಕ್ಕಾಗಿ ಯಾವುದೇ ಸ್ಪೂರ್ತಿ ಇಲ್ಲದಂತಾಗಿದೆ, ಈ ಎಲ್ಲಾ ಕುಂದು ಕೊರತೆ ಅಡಿತ ನಮ್ಮ ಮಾತೃ ಮಂದಿರ ಶಾಲೆಯ ಎಲ್ಲಾ ವರ್ಗದ ಮಕ್ಕಳಿಗೆ ಜಾತಿ ಮತವನ್ನದೇ. ಎಲ್ಲರನ್ನೂ ಸಮನಾದ ದೃಷ್ಟಿಕೋನದಲ್ಲಿರಿಸಿ, ವಿದ್ಯಾರ್ಥಿಗೆ ಬೇಕಾಗಿರುವ ಮೌಲ್ಯಗಳನ್ನು ನೀಡುತ್ತಾ, ಅವರ ಬದುಕು ಸುಂದರಗೊಳಿಸಲು ಪ್ರಯತ್ನಿಸುತ್ತಿದೆ.
ವಿದ್ಯಾರ್ಥಿಗಳಿಂದ ಶಿಕ್ಷಕ ಏನನ್ನು ಅಪೇಕ್ಷಿಸಬಲ್ಲನೆಂದರೆ ಅವನು/ ಅವಳು ಉನ್ನತ ಸ್ಥಾನದಲ್ಲಿದ್ದು ಆದಷ್ಟು ಮಟ್ಟಿಗೆ ಸಮಾಜದ ಒಳಿತಿಗಾಗಿ ಯಾವುದೇ ಆಸೆ, ಅಮಿಷಕ್ಕೆ ಒಳಗಾಗದೆ ನಿಸ್ವಾರ್ಥ ಸೇವೆ ಮಾಡಲೆಂದು, ಅದರಂತೆ ಇಂದಿನ ದಿನಮಾನಗಳಲ್ಲಿ ಮಕ್ಕಳು ದುಶ್ಚಟಕ್ಕೆ ದಾಸರಾಗಿ ತನ್ನ ಮನೆಯವರಿಗೂ, ಸಮಾಜಕ್ಕೂ ತೊಂದರೆ ಉಂಟು ಮಾಡುತ್ತಿರುವುದೇ ಕಂಡುಬರುತ್ತದೆ. ನಮ್ಮ ಶಾಲೆಯ ಈ ಪೀಡೆಗಳನ್ನು ನಿವಾರಿಸುತ್ತಾ ದಾಪುಗಾಲಿಡುತ್ತಿದೆ. ಅದಕ್ಕಾಗಿ ಶಾಲೆಯಲ್ಲಿ ಹಂತ ಹಂತವಾಗಿ ಮಕ್ಕಳಿಗೆ ಸುಸಂಸ್ಕೃತ ಶಿಕ್ಷಣ ಮೌಲ್ಯಯುತ ಶಿಕ್ಷಣ ನೀಡುತ್ತಿದೆ.
ವಿದ್ಯಾರ್ಥಿ,ಶಿಕ್ಷಕರ ಸಾಧನೆಗಳು: 1997 98ನೇ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕುಮಾರಿ ರಾಧಿಕಾ ತಂದೆ ಗುಂಡೇರಾವ್ ಚಿಂಚೋಳಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದರು. 2008 9ರಲ್ಲಿ ಅಂತರ್ ಶಾಲಾ ಮಟ್ಟದ ಐಟಿ ಕಂಪ್ಯೂಟರ್ ರಸಪ್ರಶ್ನೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಅಂತರ್ ಶಾಲಾ ಮಟ್ಟದಲ್ಲಿ ಆಯೋಜನೆಗೊಂಡ ನಿಬಂಧ ಸ್ಪರ್ಧೆಯಲ್ಲಿ ನಮ್ಮ ಶಾಲೆಯು ಪ್ರಥಮ ಸ್ಥಾನ ಪಡೆಯಲಾಯಿತು. ಇದನ್ನು ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಸಹಕಾಯ ಯೂನಿಯನ್ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ಕಲಬುರ್ಗಿ ವತಿಯಿಂದ ಜರುಗಿತು.
ನಮ್ಮ ಶಾಲೆಯ ದೈಹಿಕ ಶಿಕ್ಷಕರಾಗಿ 2017-18 ಸಾಲಿನಲ್ಲಿ ರೋಟರಿ ಕ್ಲಬ್ ವತಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವುದು ಸಂತಸದ ಸುದ್ದಿ. ದೈಹಿಕ ಶಿಕ್ಷಕರಾದ ಶ್ರೀ ರಾಜೇಂದ್ರ ಸುಣಗಾರ್ ಅವರಿಗೆ ದೊರೆತಿದೆ.