Sri Sharanappa Parmanna Kangadda Trust, Sedam (R)
(Smt Neelagangamma Sajjanshetty Kalyan Mantap, Sedam)
ಶರಣಪ್ಪ ಪರಮಣ್ಣ ಕಾನಗಡ್ಡ ಟ್ರಸ್ಟ್ ಸೇಡಂ (ರಿ) ಕಲಬುರಗಿ
ಶ್ರೀ ಶರಣಪ್ಪ ಪರಮಣ್ಣ ಕಾನಗಡ್ಡ ಮೂಲತಹ ಸೇಡಂ ತಾಲೂಕಿನ ಕಾನಗಡ್ಡ ಗ್ರಾಮ ಕೃಷಿ ಮನೆತನ. ಬಾಗಲಕೋಟೆಯ ಶ್ರೀಮತಿ ನೀಲಗಂಗಮ್ಮನವರೊಡನೆ ವಿವಾಹ. ಸೇಡಂನಲ್ಲಿ ಇವರದ್ದು ಪ್ರಸಿದ್ಧ ಅಡತ್ ಮತ್ತು ಬೆಳೆ ಕಾರ್ಖಾನೆ ಹೊಂದಿದ್ದರು. ಇವರು ಪೂಜಾ ನಿಷ್ಠರು, ಧರ್ಮ, ಭಕ್ತಿ, ಶ್ರದ್ದೆವುಳ್ಳವರು. ಹೀಗೆ ಅವರ ವ್ಯಾಪಾರ ಸಾಗುತ್ತಾ ಅವರಿಗೂ ವ್ಯಾಸಾಗುತ್ತಾ ಬಂದು ಶಿವಾಧೀಶನಾದರು. ತದನಂತರ ಶ್ರೀಮತಿ ನೀಲಗಂಗಮ್ಮ ತಾಯಿಯವರಿಗೆ ಬಹುದೊಡ್ಡ ಜವಾಬ್ದಾರಿ ನಿಭಾಯಿಸುವುದು ಅವರದಾಯಿತು. ಸೇಡಂ ಹೃದಯ ಭಾಗದಲ್ಲಿ 50,000 ಚದುರ ಅಡಿ ಸ್ಥಳದಲ್ಲಿ ಕಟ್ಟಡ ಕಾರ್ಖಾನೆ ಖಾಲಿ ಸ್ಥಳದ ವಾರಸುದಾರರು. ಇಂತಹ ವಿಶಾಲ ಕಟ್ಟಡದಲ್ಲಿ ಒಬ್ಬರೇ ವಾಸಿಸುತ್ತಿದ್ದರು. ದೊಡ್ಡ ವ್ಯಾಪಾರ ನಿರ್ವಹಿಸುವ ಜವಾಬ್ದಾರಿ ನೀಲಗಂಗಮ್ಮನವರ ಹೆಗಲಿಗೆ. ಅವರಿಗೂ ವ್ಯಯಸಾಗುತ್ತಾ ಬಂತು. ಒಂದು ದಿನ ಅಜ್ಜಿಯವರು ಬಾಗಲಕೋಟೆಯ ಶ್ರೀ ವೀರಣ್ಣ ಚರಂತಿಮಠ, ತಂಗಿಯ ಮಗನಾದ ಅಶೋಕ್ ಸಜ್ಜನವರ ಜೊತೆಗೂಡಿ ಮೂರು ಜನ ಸನ್ಮಾನ್ಯ ಬಸವರಾಜ್ ಪಾಟೀಲರ ಜೊತೆ ಸಮಾಲೋಚಿಸಿ ತಮ್ಮ ಆಸ್ತಿಯನ್ನು ಸಮಾಜಕ್ಕೆ ದಾನ ನೀಡುವ ಇಂಗಿತವನ್ನು ವ್ಯಕ್ತಪಡಿಸಿದರು. ಇಂತಹ ವಿಶಾಲ ಸ್ಥಳವನ್ನು ದಿನಾಂಕ 16.8. 1995 ರಂದು ಶ್ರೀ ಬಸವರಾಜ ಪಾಟೀಲ್ ಸೇಡಂನವರಿಗೆ ಹಸ್ತಾಂತರಿಸಿದರು. ಸನ್ಮಾನ್ಯರು ಶ್ರೀ ಶರಣಪ್ಪ ಪರಮಣ್ಣ ಕಾನಗಡ್ಡ ಅವರ ಸ್ಮರಣಾರ್ಥ ಐದು ಜನರೊಳಗೊಂಡು ಟ್ರಸ್ಟ್ ಅನ್ನು ಸ್ಥಾಪಿಸಿದರು. ಪ್ರಮುಖರಾಗಿ ಬಸವರಾಜ್ ಪಾಟೀಲ್ ಸೇಡಂ, ಸದಸ್ಯರಾಗಿ ಶ್ರೀ ಸಿದ್ದಪ್ಪ ತಳ್ಳಳ್ಳಿ, ಶ್ರೀ ಅಶೋಕ್ ಸಜ್ಜನ್, ಶ್ರೀ ಶಿವಯ್ಯ ಮಠಪತಿ, ಶ್ರೀ ನಾಗಣ್ಣ ಅಲ್ಲೂರ್ ಸದಸ್ಯರಾಗಿದ್ದರು.
ಶ್ರೀಮತಿ ನೀಲಗಂಗಮ್ಮನವರು ದಾನ ಕೊಡುವಾಗ ಯಾವಾಗಲೂ ಸತ್ಕಾರ್ಯ ನಡೆಯುತ್ತಿರಲಿ, ಅದುವೇ ಆನಂದದ ಕ್ಷಣ ‘let everyday Good events takes place; that will be happiest moment’ ಎಂಬ ಸದಾಶಯದಂತೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸತ್ಸಂಗ, ಸಂಘ ಸಂಸ್ಥೆಗಳ ನಿರಂತರ ಚಟುವಟಿಕೆಗಳು ನಿರಂತರ ಚಟುವಟಿಕೆಗಳು, ಶಾಲಾ ಕಾಲೇಜುಗಳ, ಬೌದ್ಧಿಕ ಸ್ಪರ್ಧೆಗಳಿಗಾಗಿ ಈ ಸ್ಥಳ ಉಪಯೋಗಿಸಲಾಗುತ್ತದೆ. ದಿನಾಂಕ 29.01.2003 ರಂದು ಶ್ರೀಮತಿ ನೀಲಗಂಗಮ್ಮ ತಾಯಿಯವರು ಲಿಂಗೈಕ್ಯರಾದರು. ಅವರ ಸ್ಮರಣಾರ್ಥ ಪ್ರತಿವರ್ಷ ಪುಣ್ಯ ಸ್ಮರಣೆ ಆಚರಿಸಲಾಗುವುದು. ಅನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಆಯೋಜನೆ ಸಾಧಕ ಮಹಿಳೆಯರಿಗೆ, ಅವರ ಸ್ಮರಣಾರ್ಥ ಸತ್ಕಾರ ಮಾಡಿ ಗೌರವಿಸಲಾಗುವುದು.