Select Page

Jnana Sinchana Pre University and Degree College, Kalaburagi

ಜ್ಞಾನ ಸಿಂಚನ ಕಲಾ,ವಾಣಿಜ್ಯ ಪದವಿ ಪೂರ್ವ ಹಾಗೂ ಪದವಿ ಕಾಲೇಜು ಕಲಬುರ್ಗಿ
>>>>>>>>>>>>>>>>>>>>>>>>>>>>

ಜ್ಞಾನ ಸಿಂಚನ ಪದವಿಪೂರ್ವ ಪದವಿ ಕಾಲೇಜು, ಜಿಲ್ಲಾ ಕೇಂದ್ರ ಕಲ್ಬುರ್ಗಿ ನಗರದಲ್ಲಿ ಕ್ರಮವಾಗಿ 2012 ಮತ್ತು 2020ರಲ್ಲಿ ಮೌಲ್ಯ ಹಾಗೂ ಉದ್ಯಮಶೀಲತೆಯನ್ನು ವಿದ್ಯಾರ್ಥಿಗಳು ಅಂತರ್ಗತ ಮಾಡಿಕೊಳ್ಳುವ ಶಿಕ್ಷಣವನ್ನು ನೀಡಲಾಗುತ್ತಿದೆ.
ಶಿಕ್ಷಣ ಸಮಿತಿ ಸಂಚಾಲಿತ ಜ್ಞಾನ ಸಿಂಚನ ಕಾಲೇಜುಗಳಲ್ಲಿ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಸ್ಪರ್ಧೆ, ಉದ್ಯೋಗ, ಮೌಲ್ಯ, ಆರೋಗ್ಯ, ಸಂಸ್ಕೃತಿಕ ಸಿಂಚನ ಮತ್ತು ಇಂಗ್ಲಿಷ್ ತರಗತಿಗಳನ್ನು ವಿಶೇಷವಾಗಿ ನಡೆಸುತ್ತಾ, ಇಂಗ್ಲಿಷಿನ ಕೌಶಲ್ಯವನ್ನು ಬೆಳೆಸುವ ಜೊತೆಗೆ, ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ಮೂಡಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ.
ಮೇಲಿನ ಚಟುವಟಿಕೆಗಳಿಂದ ಮಕ್ಕಳು ಅನೇಕ ಉದ್ಯೋಗ ಪಡೆದುಕೊಂಡರೆ ಇನ್ನೂ ಕೆಲವರು ಉತ್ತಮವಾಗಿ ವಾಗ್ಮಿಗಳಾಗಿ,ಲೇಖಕರಾಗಿ, ಚಿತ್ರರಂಗಕ್ಕೂ ಕೂಡಾ ಪಾದಾರ್ಪಣೆ ಮಾಡಿದ್ದಾರೆ.
ಪಿಯುಸಿ ವಾರ್ಷಿಕ ಪರೀಕ್ಷೆಗಳು ಮುಗಿದ ಮೇಲೆ ಬೇಸಿಗೆ ರಜಾ ದಿನಗಳಲ್ಲಿ ಸರ್ವ ಸೇವಾ ಬಳಗದ ಪ್ರಯತ್ನದ ಫಲವಾಗಿ ವಿಶೇಷ ವರ್ಗಗಳನ್ನು ತೆಗೆದುಕೊಂಡು ಮಕ್ಕಳನ್ನು ಮುಂದಿನ ವಿದ್ಯಾಭ್ಯಾಸಕ್ಕೆ ಅಣಿಗೊಳಿಸಿ ದಿಗಂತದತ್ತ ಸಾಗಲು ಪ್ರೇರಣೆ ನೀಡಲಾಗುತ್ತಿದೆ.