ಶ್ರೀ ಶಿವಶಂಕರ ಸ್ಮೃತಿ ಬಾಲ ಭಾರತಿ ವಿದ್ಯಾ ಮಂದಿರ ಸೇಡಮ್
ಶಾಲೆ ಸಾಮಾಜಿಕ ಪರಿವರ್ತನೆ ಕೇಂದ್ರವಾಗಬೇಕೆಂಬ ಸಂಕಲ್ಪದಲ್ಲಿ, ಶಾಲೆಯ ಮುಖಾಂತರ ಮನೆ ಮನೆಯಿಂದ ಓಣಿ ಓಣಿಯಿಂದ ಊರು ಹೀಗೆ ಶಾಲೆ ಸಮಾಜ ಪರಿವರ್ತನೆಯಲ್ಲಿ ಮಾತ್ರ ಸಾಧನೆ ಮಾಡಿದೆ.
1974ರ ವಸಂತ ಪಂಚಮಿ ಎಂದು ಪೂಜ್ಯ ಮಡಿವಾಳಯ್ಯ ಸ್ವಾಮಿಗಳ ಅಮೃತಸರದಿಂದ ಪ್ರಾರಂಭಿಸಿ, 49 ವರ್ಷ ಭಾರತೀಯತೆ ಜೊತೆಗೆ ಮೌಲ್ಯಯುತ ಶಿಕ್ಷಣ ಕೊಡುತ್ತಾ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಾ ಬರುತ್ತಿದೆ.
ಸನ್ಮಾನ್ಯ ಶ್ರೀ ಬಸವರಾಜ ಪಾಟೀಲ ಸೇಡಮ್ ಜೀ ಅವರ ಸೇಡಂನಲ್ಲಿ ಕೌಶಲ್ಯ, ಶಿಸ್ತುಬದ್ಧ ಶಾಲೆ ಪ್ರಾರಂಭಿಸಬೇಕು ಎಂಬ ಉದ್ದೇಶದಿಂದ ಕೊತ್ತಲ ಬಸವೇಶ್ವರ ದೇವಾಲಯದ ಪರಿಸರದಲ್ಲಿ ಪೂಜ್ಯ ಶ್ರೀ ಮಡಿವಾಳಯ್ಯ ಸ್ವಾಮಿಗಳ ಅಮೃತವರ್ಸ್ತದಿಂದ ಪ್ರಾರಂಭಿಸಿದರು.
ಇಂದು ಸುಮಾರು 26 ಜನ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು, 634 ವಿದ್ಯಾರ್ಥಿಗಳು ಸುಸಜ್ಜಿತವಾದ ಕಟ್ಟಡದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಗುರಿ ಮತ್ತು ಉದ್ದೇಶಗಳು
* ಶಾಲೆ ಸಾಮಾಜಿಕ ಪರಿವರ್ತನೆ ಕೇಂದ್ರ
* ಸಮಾಜದಲ್ಲಿ ಶ್ರೀಮಂತ, ಬಡವ, ಹಿಂದುಳಿದ ಎನ್ನುವ ಭೇದಭಾವವಿಲ್ಲದೆ ಉತ್ತಮ ಶಿಕ್ಷಣ ನೀಡುವುದು
* ಅಕ್ಷರಭ್ಯಾಸದ ಜೊತೆಗೆ ಸಂಸ್ಕಾರಯುತ ನೈತಿಕ ಶಿಕ್ಷಣ ನೀಡುವುದು
* ಶಾರೀರಿಕ ಮಾನಸಿಕ ದೃಷ್ಟಿಯಿಂದ ವ್ಯಾಯಾಮ, ಯೋಗ, ಧ್ಯಾನ, ಪ್ರಾರ್ಥನೆ ಗಳಿಗೆ ಆದ್ಯತೆ ನೀಡುವುದು.
ಬಾಲ ಭಾರತಿ ವಿದ್ಯಾ ಮಂದಿರದಲ್ಲಿ ಅಧ್ಯಯನಗದ ಮಕ್ಕಳು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಾ, ಉತ್ತಮ ಸ್ಥಾನಮಾನಗಳೊಂದಿಗೆ ಗುರುತಿಸಿಕೊಂಡಿದ್ದಾರೆ.
ಸಮಿತಿಗೆ ಸಂದರ್ಶನ ನೀಡಿರುವ ಹಲವಾರು ಗಣ್ಯರ ಮತ್ತು ಪೂಜ್ಯರಿಂದ ಮಾರ್ಗದರ್ಶನ ಪಡೆದು ಸಮಾಜ ಪರಿವರ್ತನೆ ಸಂಕಲ್ಪದ ತತ್ವವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.
ಸಂಪರ್ಕ:
ಶ್ರೀ.ಶಿವಾರೆಡ್ಡಿ ಹೂವಿನಬಾವಿ
9448204620
ಶ್ರೀ ನಿಂಗಪ್ಪ ಬಿರಾದರ್
9901743977.