Seth Sri Tulsiram Gilada Nrupatunga Arts, Commerce Manegment And Science First Grade College
ನೃಪತುಂಗ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪ್ರಥಮ ದರ್ಜೆ ಮಹಾವಿದ್ಯಾಲಯ
ಕಾಲೇಜು ಉದ್ದೇಶ ಮತ್ತು ಗುರಿ
ಜ್ಞಾನ ಕರ್ಮಗಳನ್ನು ಸಮನ್ವಯಗೊಳಿಸಿದ ಪೂರ್ಣಾನಂದ ಸಾಕ್ಷಾತ್ಕಾರಕ್ಕಾಗಿ ಶ್ರಮಿಸುವುದು.
ನಮ್ಮ ಕಾರ್ಯ
ಯುವಶಕ್ತಿಯನ್ನು ಕೌಶಲ್ಯ ಸಹಿತ ಉದ್ಯೋಗಿ ಹಾಗೂ ಉದ್ಯಮಶೀಲರನ್ನಾಗಿ ತರಬೇತಿ ನೀಡಿ ಸಜ್ಜುಗೊಳಿಸುವುದು.
ಭೌತಿಕ ಬೌದ್ಧಿಕ ನೈತಿಕ ಭಾವನಾತ್ಮಕ ಆಧ್ಯಾತ್ಮಿಕ ಸಾಮಾಜಿಕ ಸಮನ್ವಯದೊಂದಿಗೆ ರಾಷ್ಟ್ರಭಕ್ತಿಯನ್ನು ಬಿಂಬಿಸುವ ಸಮಗ್ರ ವ್ಯಕ್ತಿತ್ವವನ್ನು ರೂಪಿಸುವುದು.
ನಮ್ಮ ಗುರಿ
ಶಾಲೆಯು ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಬೇಕು.
ಕಾಲೇಜು ಕುರಿತಾದ ಸಂಕ್ಷಿಪ್ತ ಮಾಹಿತಿ
ನಮ್ಮ ಕಾಲೇಜು ಗುಲ್ಬರ್ಗ ವಿಶ್ವಾಸ್ ವಿದ್ಯಾಲಯದಿಂದ ಶಾಶ್ವತ ಸಂಯೋಜನೆ ಹೊಂದಿದೆ. ನವ ದೆಹಲಿಯ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಯುಜಿಸಿ ಅಧಿನಿಯಮ 1956ರ ಅಡಿಯಲ್ಲಿ(12)ಬಿ. (2)ಎಫ್. ಮಾನ್ಯತೆಯನ್ನು ಪಡೆದುಕೊಂಡಿದೆ. 2005ರಲ್ಲಿ ಮೊದಲ ಬಾರಿಗೆ ನ್ಯಾಕ್ ಗೆ ಒಳಪಟ್ಟಾಗ ಬಿ + + ಮಾನ್ಯತೆ ಪಡೆದಿರುತ್ತದೆ. 2012ರಲ್ಲಿ ಎರಡನೇ ಬಾರಿಗೆ ನ್ಯಾಕ್ ದಿಂದ ಬಿ ಗ್ರೇಟ್ ಮಾನ್ಯತೆ ಪಡೆದಿರುತ್ತದೆ . 2019ರಲ್ಲಿ ಮೂರನೇ ಬಾರಿಗೆ ನ್ಯಾಕ್ ದಿಂದ ಬೀ ಗ್ರೇಡ್ ಮಾನ್ಯತೆ ಪಡೆದಿರುತ್ತದ.
ಕಾಲೇಜು ಪ್ರಾರಂಭವಾದ ವರ್ಷ ಮತ್ತು ಇತಿಹಾಸ
ನಮ್ಮ ಕಾಲೇಜು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಶಾಶ್ವತ ಸಂಯೋಜನೆಯೊಂದಿಗೆ ಬಿಎ ಮತ್ತು ಬಿಕಾಂ ಕೋರ್ಸ್ಗಳಿಗೆ 1984ರಲ್ಲಿ ಅನುಮತಿ ಪಡೆದಿ ದೆ.
ಈ ಭಾಗದಲ್ಲಿ ಆಳ್ವಿಕೆ ಮಾಡಿದ ಜಗತ್ತಿನ ಶ್ರೇಷ್ಠ ಚಕ್ರವರ್ತಿಗಳಲ್ಲಿ ಒಬ್ಬರಾದ ನೃಪತುಂಗ (ಅಮೋಘವರ್ಷ)ನ ಹೆಸರಿನ ನಾಮಕರಣದೊಂದಿಗೆ ಕಾಲೇಜು ಪ್ರಾರಂಭಿಸಿದೆ.
ಕಾಲೇಜು, ವಿದ್ಯಾರ್ಥಿ, ಶಿಕ್ಷಕರ, ಸಾಧನೆಗಳು.
1. 1984 ರಿಂದ ಇಲ್ಲಿಯವರೆಗೆ ವಿಶ್ವವಿದ್ಯಾಲಯದಿಂದ 25 ವಿದ್ಯಾರ್ಥಿಗಳು ರಾಂಕ್ ಪಡೆದುಕೊಂಡಿರುತ್ತಾರೆ.
2. ಇವರಿಗೆ ವಿಶ್ವವಿದ್ಯಾಲಯ ಮಟ್ಟದ ಕ್ರೀಡೆಗಳಲ್ಲಿ ಚಿನ್ನದ ಪದಕ 12 ಬೆಳ್ಳಿ ಪದಕ 17 ಮತ್ತು ಕಂಚು 19 ಪದಕಗಳನ್ನು ಪಡೆದುಕೊಂಡಿದೆ. ಜೊತೆಗೆ ಸುಮಾರು 23 ವಿದ್ಯಾರ್ಥಿನಿಯರು ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.
3. ಡಾ ಶ್ರೀಮತಿ ಬಿದರಿ ಸದನ ಭಾಗ ಕನ್ನಡ ಸಹ ಪ್ರಾಧ್ಯಾಪಕರು ರಾಜ್ಯಮಟ್ಟದ ಉತ್ತಮ ಅಧಿಕಾರಿಯಂದು ರಾಜ್ಯಮಟ್ಟದ ಪ್ರಶಸ್ತಿ ಪಡೆದುಕೊಂಡಿರುತ್ತಾರೆ.
ಹಿರಿಯ ವಿದ್ಯಾರ್ಥಿಗಳ ಮಾಹಿತಿ
ಕಾಲೇಜು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಅಧ್ಯಯನ ಮಾಡಿದ ವಿದ್ಯಾರ್ಥಿಗಳಲ್ಲಿ ಅನೇಕ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನ್ಯಾಯಾಧೀಶರಾಗಿ ಹಾಗೂ ನ್ಯಾಯವಾದಿಗಳಾಗಿ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿ ಆಗಿ ಹಾಗೂ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ (MD). ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಇನ್ನಿತರ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ. ಹಾಗೂ ಉಪನ್ಯಾಸಕರಾಗಿ ಶಿಕ್ಷಕರಾಗಿ ಉದ್ಯಮದಾರರಾಗಿ ಮತ್ತು ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾಲೇಜಿನ ಮುಂದಿನ ಯೋಜನೆಗಳು
ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸಲು ಅನೇಕ ಕಾರ್ಯಗಾರಗಳನ್ನು ಆಯೋಜನೆ ಮಾಡುವುದು.
ಸ್ವಾವಲಂಬಿ ಸ್ವಾಭಿಮಾನ ಬದುಕಿಗಾಗಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದು.
ಹೆಚ್ಚು ಹೆಚ್ಚು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಕೌಶಲ್ಯಕ್ಕೆ ಸಂಬಂಧಿಸಿದ ಕೋರ್ಸುಗಳನ್ನು ಮತ್ತು ವಿಷಯಗಳನ್ನು ಕಾಲೇಜಿನಲ್ಲಿ ಅನುಷ್ಠಾನಗೊಳಿಸುವುದು.
ಕಾಲೇಜು ಸಂಪರ್ಕ
ಪ್ರೊ. ಶಾಮ್ ಸುಂದರ್ ವಿ., ಪ್ರಾಚಾರ್ಯರು, ನೃಪತುಂಗ ಮಹಾವಿದ್ಯಾಲಯ ಸೇಡಂ 585222.
ಮೊಬೈಲ್ ನಂಬರ್ 9448813478.
ಇ-ಮೇಲ್ ಐಡಿ . ndcsedam@rediffmail.com
Website: https://narpatungasedam.com a.com