Select Page

Sharada Sangeeta Shale , Sedam

 ಶಾರದಾ ಸಂಗೀತ ಶಾಲೆ

  ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಂಸ್ಥೆಯ ವಿವಿಧೋದ್ದೇಶದ ಪ್ರಕಲ್ಪಗಳಲ್ಲಿ ಒಂದಾದ ಶಾರದ ಸಂಗೀತ ಶಾಲೆಯು 1984 ರಲ್ಲಿ ಆರಂಭಗೊಂಡಿತು. ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೀಠಾಧೀಶರಾದ ಪರಮ ಪೂಜ್ಯ ಲಿಂಗೈಕ್ಯ ಮಡಿವಾಳಯ್ಯ ಸ್ವಾಮಿಗಳವರ ಸಂಗೀತ ಸರಸ್ವತಿಯ ಪ್ರವರ್ತಕರು. ಸಂಗೀತ ಪಾರಂಗತರಾಗಿದ್ದ ಶ್ರೀಗಳು ಸ್ವತಃ ಹಾರ್ಮೋನಿಯಂ ನೋಡಿಸುವವರಾಗಿದ್ದರು. ಶ್ರಾವಣ ಮಾಸದಲ್ಲಿ 63 ಪುರಾತನ ಶರಣರ, ಭಜನೆ, ಜಾತ್ರೆಯಲ್ಲಿ ನಾಟಕ ಕಲಿತುವುದರ ಮೂಲಕ ನಾದಕಲೆಯನ್ನು ಪೋಷಿಸಿಕೊಂಡು ಬಂದರು. ಬಾಲ ಭಾರತಿ ಶಿಶು ಮಂದಿರದ ಆರಂಭಿಕ ದಿನಗಳಲ್ಲಿ ಪೂಜ್ಯರು ಸಂಗೀತ ದರ್ಶನ ಇಂದಿನ ಬೆಳವಣಿಗೆಗೆ ದಿಕ್ಸೂಚಿಯಾಯಿತು. ವೇದ ಮೊದಲು ಮಕ್ಕಳಿಗೆ ವಚನಗಳು, ದಾಸರಪದ, ಭಕ್ತಿ, ದೇಶಭಕ್ತಿ ಗೀತೆಗಳನ್ನು ಹೇಳಿಸುವುದರ ಮೂಲಕ ತನ್ನ ಗತಿ ಬದಲಿಸಿಕೊಂಡು ಇಂದು ಸ್ವತಂತ್ರ ಪ್ರತಾಪವಾಗುವ ಮೂಲಕ ಬೆಳೆದಿದೆ.

 

 ಬಾಲ ಭಾರತಿ ಶಾಲೆಯ ತಳಪಾಯದ ವರ್ಷಗಳಲ್ಲಿ ( 1970 80ರ ದಶಕ ) ಶ್ರೀ ಶಿವಶಂಕರ ಪುಷ್ಪದ್ ಸಂಗೀತ ಶಿಕ್ಷಕರಾಗಿದ್ದರು. ಇವರಿಗೆ ವಿಷಯ ಬೋಧಕರಾದ ಶ್ರೀ ಬಸವರಾಜಯ್ಯ ಹಿರೇಮಠ, ಶ್ರೀ ಗುರು ಶಾಂತಯ್ಯ ಮಠಪತಿ, ಸಹಾಯಕರಾಗಿದ್ದರು. 1983 ರಲ್ಲಿ ಸಂಸ್ಥೆಗೆ ಭೇಟಿ ಕೊಟ್ಟಿದ್ದ ಹೆಸರಾಂತ ಚಿತ್ರನಟ ಉದಯ್ ಕುಮಾರ್ ಮಕ್ಕಳ ಗಾಯನ, ವಾದನ ಹಾಗೂ ನಟನೆ ವೀಕ್ಷಿಸಿ ಸಂತಸಗೊಂಡರು. ದೃಶ್ಯ ಕಲಾವಿದ ಪಿ ಆರ್ ಭಾಗವತರು ಮಕ್ಕಳಿಗೆ ನೀಡುತ್ತಿರುವ ‘ ಅಭ ಶಿಕ್ಷಣ ‘( ಓರಿಯಂಟೇಶನ್) ಪ್ರತ್ಯಕ್ಷ ನೋಡಿ ಪ್ರೋತ್ಸಾಹಿಸಿದರು.

 

  1984 ರಲ್ಲಿ ಶಾರದ ಸಂಗೀತ ಶಾಲೆಯ ಹೆಸರಿನೊಂದಿಗೆ ಮರುನಾಮಕರಣಗೊಂಡು ಹಿಂದೂ ಪ್ರತ್ಯೇಕ ಪ್ರಕಲ್ಪವಾಗಿ ಬೆಳೆದು ನಿಂತಿದೆ. ಧಾರವಾಡದ ಹೆಸರಾಂತ ಸಂಗೀತ ಮನೆತನದ ಸವಾಯಿ ದಂಪತಿಗಳಾದ ಶ್ರೀಮತಿ ಪದ್ಮ ಶ್ರೀನಿವಾಸ್ ಸಾವಾಯಿಯವರು ಹಲವಾರು ವರ್ಷ ಶಾಲೆಯನ್ನು ಮುನ್ನಡೆಸಿಕೊಂಡು ಬಂದರು. ಮೊದಲು ಗುಡಿಯ ಪರಿಸರದಲ್ಲಿದ್ದು ಸಂಗೀತ ಶಾಲೆ ಇಂದು ತುಳಜಾಭವಾನಿ ಯಶು ವಿಹಾರದ ಪ್ರತ್ಯೇಕ ಕೋಣೆಯೊಂದರಲ್ಲಿ ನಡೆಯುತ್ತಿದೆ. ಕುಮಾರಿ ಅಂಜನಾದೇವಿ ಹಾಗೂ ಅವರ ಸಹೋದರ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದಾರೆ. 2008ರಲ್ಲಿ ಮಾತೃಶಾಯ ಶಾಲೆಯ ಮೈದಾನದಲ್ಲಿ ಸಂಗೀತ ಹಾಗೂ ಅಭಿನಯ ಕೇಂದ್ರ ತೆರೆಯಲಾಯಿತು. ಈಗ ಸಂಸ್ಥೆಯ ಕೆಲವು ಶಾಲೆಗಳಲ್ಲಿ ಸಂಗೀತ ವಾದ್ಯಗಳೊಂದಿಗೆ ಪ್ರಾರ್ಥನೆ ನಡೆಸಲಾಗುತ್ತಿದೆ.