Vidya Mandir English Medium State Syllabus School, Sedam
ವಿದ್ಯಾ ಮಂದಿರ ರಾಜ್ಯ ಪಠ್ಯ ಕ್ರಮ ಶಾಲೆ 5 ಮಕ್ಕಳಿಂದ 2009 ರಲ್ಲಿ ಪ್ರಾರಂಭವಾಗಿ, ಇಂದು ಸುಮಾರು 480 ಮಕ್ಕಳು LKG ಯಿಂದ 10ನೇ ತರಗತಿಯಲ್ಲಿ ಓದುತ್ತಿದ್ದಾರೆ.
ಕಡಿಮೆ ಶುಲ್ಕ ದಲ್ಲಿ ಮಕ್ಕಳಿಗೆ ಇಂಗ್ಲಿಷ್ ಮದಮ್ಯದಲ್ಲಿ ಓಡಿಸಬೇಕೆಂಬ ಪಾಲಕರ ಕನಸನ್ನು ನಮ್ಮ ಶಾಲೆ ನನಸು ಮಾಡಿದೆ. ಹೆಚ್ಚಾಗಿ ಗ್ರಾಮೀಣ ಭಾಗದಿಂದ ಮಕ್ಕಳು ಶಾಲೆಗೆ ಬರುವುದು ವಿಷೇಶ. ಸೇಡಂ ಸುತ್ತಮುತ್ತಲಿನ ಗ್ರಾಮಗಳಾದ ಉಡ್ಗಿ,ಬಟಗೆರಾ,ಮುಧೂಳ್,ಸಿಂದನ್ಮಡು, ಗುಂಡಳ್ಳಿ, ಕಾಚ್ವಾರ್, ಹಣಮನಹಳ್ಳಿ, ತೊಟ್ನಳ್ಳಿ, ನೀಲಹಳ್ಳಿ, ಕೊಂಕನಳ್ಳಿ, ಭೂತಪೂರ್, ರೈಕೋಡ್, ರೂದ್ನೂರ, ನೀಡಗುಂದಿ ಮುಂತಾದ ಹಳ್ಳಿಗಳಿಂದ ಸುಮಾರು 200 ಮಕ್ಕಳು ಬರುತ್ತಾರೆ.
ಇಂಗ್ಲಿಷ್ ಮಾಧ್ಯಮ ಓದುವ ಮಕ್ಕಳಲ್ಲಿ ಸಂಸ್ಕಾರ ಕಡಿಮೆ ಇರುತ್ತದೆ ಎನ್ನುವ ಜನರ ಅನಿಸಿಕೆಯನ್ನು ನಮ್ಮ ಶಾಲೆ ಸುಳ್ಳು ಮಾಡಿದೆ, ನಮ್ಮಲ್ಲಿ ಎಲ್ಲಾ ಹಬ್ಬಗಳನ್ನು ಆಚರಿಸಿ ಅದರ ಮಹತ್ವ ಮಕ್ಕಳಿಗೆ ತಿಳಿಸಿ ಕೊಡುತ್ತೇವೆ.ವಚನ, ಶ್ಲೋಕ, ರಾಮಾಯಣ ಮತ್ತು ಮಹಾಭಾರತದ ವಿಷಯಗಳನ್ನು ಮಕ್ಕಳಿಗೆ ತಿಳಿಸಿಕೊಡುತ್ತೇವೆ.
ನಮ್ಮ ಶಾಲೆಯಲ್ಲಿ 28 ನುರಿತ ಮತ್ತು ಅನುಭವಿ ಶಿಕ್ಷಕರು ಇದ್ದಾರೆ.ವರ್ಷ್ ದಿಂದ ವರ್ಷಕ್ಕೆ ಶಾಲೆ ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಲು ಹೆಮ್ಮೆ ಅನಿಸುತ್ತದೆ.