Select Page

ಶ್ರೀಮತಿ ನಥಿಯ ಸೀತಾರಾಮ್ ಜೇಠಮಲ್ ತಾಪಡಿಯ ಮಾತೃಛಾಯ ಪದವಿ ಪೂರ್ವ ಕಾಲೇಜು ಸೇಡಮ್.

 1986 ರಲ್ಲಿ ಮಾತೃಶಯ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗವನ್ನು, ನಂತರ ಪಾಲಕರ ಬೇಡಿಕೆಗನುಗುಣವಾಗಿ ಮತ್ತು ವಿದ್ಯಾರ್ಥಿಗಳ ಬೇಡಿಕೆಗನುಗುಣವಾಗಿ ವಿಜ್ಞಾನ ವಿಭಾಗವನ್ನು ಪ್ರಾರಂಭಿಸಲಾಯಿತು.
 ರಾಜ್ಯದ ಗಡಿಭಾಗದಲ್ಲಿರುವ ಸೇಡಂ ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ, ರಾಷ್ಟ್ರಭಕ್ತಿ,ರಾಷ್ಟ್ರಪ್ರೇಮದ ಜೊತೆ ಉತ್ತಮ ಸಂಸ್ಕಾರಗಳನ್ನು ನೀಡುತ್ತಾ ಮಕ್ಕಳ ಸರ್ವಾಂಗಿಣ ಬೆಳವಣಿಗೆಗೆ ಪ್ರಯತ್ನಿಸುತ್ತಿದೆ.
ಮಕ್ಕಳಲ್ಲಿ ಎನ್ಎಸ್ಎಸ್ ಮೂಲಕ ಸೇವಾ ಮನೋಭಾವನೆ, ಸಾಮಾಜಿಕ ಕಳಕಳಿ, ಭಾತೃತ್ವ, ಸಹೋದರತೆ, ಪರಿಸರ ಸ್ವಚ್ಛತೆಯ ಜೊತೆಗೆ ಗ್ರಾಮೀಣ ಕಲ್ಪನೆ ಮೂಡಿಸುತ್ತಿದೆ.
ಇಕೋ ಕ್ಲಬ್ ಮೂಲಕ ಪರಿಸರ ಕಾಳಜಿಯ ಪರಿಕಲ್ಪನೆ ಮೂಡಿಸುತ್ತಿದೆ. ವಿದ್ಯಾರ್ಥಿಗಳಿಗೆ ಆಟ ಮೇಲಾಟಗಳನ್ನು ಆಯೋಜಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸುವಂತೆ ಕ್ರೀಡಾ ತರಬೇತಿ ನೀಡಲಾಗುತ್ತಿದೆ. ಸುಮಾರು 30 ರಷ್ಟು ಸೇವಾ ಬಳಗ ಹೊಂದಿ 700 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಪಾಠ ಪ್ರವಚನವನ್ನು ಆಲಿಸಲು ಸುಸಜ್ಜಿತವಾದ ಕಟ್ಟಡ ಮತ್ತು ಗ್ರಂಥಾಲಯ ವ್ಯವಸ್ಥೆ ಇದೆ.
 ಕಾಲೇಜಿನಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉನ್ನತ ಹುದ್ದೆ ಹೊಂದಿ, ಕಾಲೇಜಿಗೆ, ಪಾಲಕರಿಗೆ. ಮತ್ತು ಸಂಸ್ಥೆಗೆ ಕೀರ್ತಿ ತಂದಿದ್ದಾರೆ