Since 1975
HANUMAN VYAYAM SHAALE(GYM)
A PATHWAY TO HEALTH: START YOUR FITNESS JOURNEY WITH THE GYM AND ATTAIN PHYSICAL POSSIBILITIES
ಶ್ರೀ ಹನುಮಾನ್ ವ್ಯಾಯಾಮ ಶಾಲೆ ಸೇಡಂ,
( A Sound Mind in a Sound Body )
ಶ್ರೀ ಕೊತ್ತಲಬಸ್ವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ, ಶ್ರೀ ಹನುಮಾನ್ ಶಾಲೆ, ಸೇಡಂ.
1975ರಲ್ಲಿ ಚಿಕ್ಕ ಪ್ರಮಾಣದಲ್ಲಿ ಗುಡಿಯ ಮೇಲ್ಭಾಗದ ಕೋಣೆಯಲ್ಲಿ ಪ್ರಾರಂಭಿಸಲಾಯಿತು. ಪ್ರಾರಂಭದಲ್ಲಿ ಇದರ ಸಂಚಾಲಕರಾದ ಡಾಕ್ಟರ್ ಮೇಘನಾಥ್ ದೇಸಾಯಿ ಅವರು ಜವಾಬ್ದಾರಿ ತೆಗೆದುಕೊಂಡು ನಿರಂತರವಾಗಿ ಸುಮಾರು 45 ವರ್ಷಗಳ ಕಾಲ ನಗರದ ಯುವಕರಿಗೆ ತರಬೇತಿ ಕೊಟ್ಟು ವ್ಯಾಯಾಮ ಮಾಡಿ ದೃಢಶಯರಾಗುವುದರಲ್ಲಿ ಸಹಕಾರ ನೀಡಿದ್ದಾರೆ. ಪ್ರತಿ ವರ್ಷ ಸುಮಾರು 20ಕ್ಕೂ ಹೆಚ್ಚು ಯುವಕರು ನಿತ್ಯ ಬೆಳಗ್ಗೆ ಮತ್ತು ಸಾಯಂಕಾಲ ವ್ಯಾಯಾಮ ಮಾಡುತ್ತಿದ್ದರು.
ಈ ವ್ಯಾಯಾಮ ಶಾಲೆಯಲ್ಲಿ ತರಬೇತಿ ಪಡೆದವರು ಪೊಲೀಸ್ ಇಲಾಖೆಯಲ್ಲಿ ಅನೇಕ ಹುದ್ದೆಗಳಲ್ಲಿ ಆಯ್ಕೆ ಆಗಿರುವುದು ಹೆಮ್ಮೆಯ ಸಂಗತಿ. ಸುಧಾರಣಾ ಸಮಿತಿ ರಚಿಸಿ ಅನೇಕರೊಂದಿಗೆ ಸೇರಿ ನಗರದಲ್ಲಿ ಊರಿನ ಗಣ್ಯರೊಂದಿಗೆ ಆರ್ಥಿಕ ಸಂಗ್ರಹ ಮಾಡಿ ಸದ್ಯ ವ್ಯವಸ್ಥಿತ ವ್ಯಾಯಾಮ ಶಾಲೆ ಮಾತೃಶಯ ಪರಿಸರದಲ್ಲಿ ತಲೆಯೆತ್ತಿದೆ. 3 ಲಕ್ಷಕ್ಕು ಹೆಚ್ಚಿನ ಮೌಲ್ಯದ ವ್ಯಾಯಾಮ ಮಾಡುವ ಸಲಕರಣೆಗಳಿವೆ, ಈ ಕಾರ್ಯಕ್ಕೆ ನಗರದ ಶ್ರೀ ದತ್ತಾತ್ರೇಯ ಐನಾಪುರ್ ( ಕಟ್ಟಿಗೆ ಅಡ್ಡ), ಸತೀಶ್ ಬಾಬೂ ಚಿಟ್ಟಮ್, ವೆಂಕಟೇಶ್ ಐನಾಪುರ್, ಅನಂತ್ ದೇಶಕ್, ವಿನೋದ್ ಬಜಾಜ್, ಮಿಶ್ರಮ್ , ಮಲ್ಲಿಕಾರ್ಜುನ್ ಪೂಜಾರಿ, ರಾಜೇಂದ್ರ ಸುಣಗಾರ್, ಸತೀಶ್ ಐನಾಪುರ್ ಇನ್ನು ಅನೇಕರು ವ್ಯಾಯಾಮ ಶಾಲೆಯ ಬೆಳವಣಿಗೆಗೆ ಸಹಕರಿಸಿದ್ದಾರೆ. ಪ್ರತಿ ವರ್ಷ ವಾರ್ಷಿಕೋತ್ಸವ ಮಾಡಿ ಸಾರ್ವಜನಿಕ ಸಮಾರಂಭ ಆಯೋಜಿಸಲಾಗುತ್ತಿತ್ತು.
ವಿಶೇಷತೆ: ಡಾ|| ಮೇಘನಾಥ್ ದೇಸಾಯಿ ಅವರು ಯಾವ ಸಂಭಾವನೆಯನ್ನು ಪಡೆಯದೆ ಸುಮಾರು 45 ವರ್ಷಗಳ ಕಾಲ ಈ ಹನುಮಾನ್ ಶಾಲೆ ಕಟ್ಟಿ ಬೆಳೆಸಿದ್ದಾರೆ. ಅವರ ನಿಸ್ವಾರ್ಥ ಸೇವೆಗೆ ಸಂಸ್ಥೆಯ ಹಿರಿಯರು ಅಭಿನಂದಿಸಿದ್ದಾರೆ.
“NO PAIN – NO GAIN.”
Gym H0urs
Monday – Saturday
Mroning 6am – 7:30am
Evening 6pm-7:30pm
Contact Details
Kashinath
(Gym Trainer)
+91-9844184249