Select Page

Sri Kothala Basaveshwar High School , Mudhol Tq Sedam Dist :Kalaburgi

ಆಡಳಿತ ಮಂಡಳಿ : ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಮ್
ಶಾಲೆಯ ಹೆಸರು : ಶ್ರೀ ಕೊತ್ತಲ ಬಸವೇಶ್ವರ ಪ್ರೌಢಶಾಲೆ ಮುಧೋಳ ತಾ||ಸೇಡಮ್

-: ಶಾಲಾ ಇತಿಹಾಸ : –
ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಮ್‌ನ ಶಾಲೆ
ಸಾಮಾಜಿಕ ಪರಿವರ್ತನೆಯ ಕೇಂದ್ರ ಎನ್ನುವ ಆಶಯದೊಂದಿಗೆ ಶ್ರೀ ಕೊತ್ತಲ ಬಸವೇಶ್ವರ ಪ್ರೌಢಶಾಲೆಯು 2003-04 ನೇ ಸಾಲಿನಲ್ಲಿ 27 ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಪ್ರಾಥಮಿಕ ವಿಭಾಗದ ಪ್ರಧಾನ ಅಧ್ಯಾಪಕರಾಗಿದ್ದ ಶ್ರೀ ಗುರುಶಾಂತಯ್ಯ ಭಂಟನೂರು ರವರ ಪ್ರಭಾರತ್ವದೊಂದಿಗೆ ಪ್ರಾರಂಭವಾಯಿತು.
ಪ್ರಾರAಭದಲ್ಲಿ ಪ್ರಾಥಮಿಕ ವಿಭಾಗದ ಶಿಕ್ಷಕರ ಬೋದನೆಯೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವ ಪ್ರಯತ್ನ ಆರಂಭವಾಯಿತು. ಈ ಸಮಯದಲ್ಲಿ ಮುಧೋಳ ಗ್ರಾಮದಲ್ಲಿ 3
ಪ್ರೌಢಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದವು. ಸ್ಪರ್ಧಾತ್ಮಕ ಗುಣಮಟ್ಟದ ಶಿಕ್ಷಣ ಹಾಗೂ ದಾಖಲಾತಿ ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಆ ಸಂಧರ್ಭದಲ್ಲಿತ್ತು. ಶ್ರೀ ಬಸವರಾಜ
ಪಾಟೀಲ್ ಸೇಡಮ್ ಹಾಗೂ ಶ್ರೀ ನಾಗರೆಡ್ಡಿ ಪಾಟೀಲ್ ರವರ ಆಶಯದಂತೆ 2004-05 ನೇ ಸಾಲಿನಲ್ಲಿ 5 ಜನ ಶಿಕ್ಷಕರನ್ನು ನೇಮಿಸಿಕೊಳ್ಳಲಾಯಿತು. ಆದರೆ ಆಡಳಿತಾತ್ಮಕ
ಸಮಸ್ಯೆಗಳು ಉಂಟಾದಾಗ ನಮ್ಮ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಯಚೂರಿ£ಲ್ಲಿÀ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ
ಮುಧೋಳ ಗ್ರಾಮದವರೇ ಆದ ಡಾ|| ಸೋಮನಾಥರೆಡ್ಡಿ ಪಾಟೀಲ್ ರವರ ಹೆಚ್ಚಿನ ಮುತುವರ್ಜಿಯಿಂದ 2005-06 ನೇ ಸಾಲಿನಲ್ಲಿ ಆಡಳಿತಾತ್ಮಕ ಸಮಸ್ಯೆಗಳಿಗೆ ಪರಿಹಾರ
ದೊರಕಿದುದು ಉಲ್ಲೇಖಿಸುವ ವಿಷಯವಾಗಿದೆ. ಸಮಿತಿಯ ಮಾರ್ಗದರ್ಶನ, ಶಿಕ್ಷಕರ ಮುತುವರ್ಜಿ, ಪಾಲಕರ ಸಹಕಾರದೊಂದಿಗೆ ಒಳ್ಳೆಯ ಶಾಲಾ ಕಟ್ಟಡ ನಿರ್ಮಾಣದೊಂದಿಗೆ
ವರ್ಷAಪ್ರತಿ ಮಕ್ಕಳ ದಾಖಲಾತಿಯಲ್ಲಿ ಹೆಚ್ಚಳವಾಗತೊಡಗಿತು.

-: ಶಾಲಾ ಸಾಧನೆಗಳು : –
ಶ್ರೀ ಕೊತ್ತಲ ಬಸವೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಯ ಹಾಗೂ ವಿದ್ಯಾಭಾರತಿ ಕರ್ನಾಟಕ ಆಯೋಜಿತ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಳ್ಳೆಯ ಸಾಧನೆ
ಕೈಗೊಂಡು ರಾಜ್ಯ ಹಾಗೂ ಪ್ರಾಂತ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಹಿರಿಯ ವಿದ್ಯಾರ್ಥಿಗಳಾದ ಪವನಕುಮಾರ ದೇವನಪಲ್ಲಿ, ಮಹೇಶಕುಮಾರ ಪಸಾರ ಹಾಗೂ
ರೀತಿಕಾ ಮಹೇಂದ್ರಕರ್ ತೃತಿಯ ಸ್ಥಾನವನ್ನು ¥ಡೆದಿದುದು ಉಲ್ಲೇಖನಿಯ. ಕ್ರೀಡಾ ವಿಭಾಗದಲ್ಲಿಯೂ ಸಹ ಪ್ರಾಂತ ಮಟ್ಟದಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದಾರೆ. ನಮ್ಮ
ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ವೆಂಕಟರೆಡ್ಡಿ ನಾಗವಾರ ಆಸ್ಟೆçÃಲಿಯಾದಲ್ಲಿ ಹಾಗೂ ರಾಹುಲ ಖೇವಜಿ ಅಮೇರಿಕಾದಲ್ಲಿ ಸಾಫ್ಟವೇರ್ ಇಂಜಿನೀಯರಗಳಾಗಿ ಕಾರ್ಯ
ನಿರ್ವಹಿಸುತ್ತಿದ್ದಾರೆ ಇದಲ್ಲದೆ ಬೆಂಗಳೂರು, ಹೈದ್ರಾಬಾದ, ಮುಂಬೈ ಗಳಲ್ಲಿ ಅನೇಕ ವಿದ್ಯಾರ್ಥಿಗಳು ಸಾಫ್ಟವೇರ್ ಇಂಜಿನೀಯರಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಡಾ|| ಪಂಕಜಕುಮಾರ ಎಮ್.ಎಸ್ ರವರು ದೆಹಲಿ ಸರಕಾರದಲ್ಲಿ ಸರ್ಜನರಾಗಿ ನೇಮಕಗೊಂಡಿದ್ದಾರೆ. ಒಟ್ಟಾರೆಯಾಗಿ ಸುಮಾರು 100 ಕ್ಕಿಂತ ಹೆಚ್ಚು ಇಂಜಿನೀಯರಗಳು
ಹಾಗೂ 15 ವಿದ್ಯಾರ್ಥಿಗಳು ಡಾಕ್ಟರಗಳಾಗಿ ಸೇವೆಸಲ್ಲಿಸುವದರೊಂದಿಗೆ ಶಿಕ್ಷಕರು,  ಕೃಷಿಕರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

-: ಶಾಲೆಯ ಸಂಖ್ಯಾ ಮಾಹಿತಿ : –
ಶ್ರೀ ಕೊತ್ತಲ ಬಸವೇಶ್ವರ ಪ್ರೌಢಶಾಲೆಯಲ್ಲಿ ಪ್ರಸ್ತುತ 6 ಜನ ಶಿಕ್ಷಕರು, 3 ಜನ ಶಿಕ್ಷಕಿಯರು, ಒಬ್ಬರು ದ್ವಿತೀಯ ದರ್ಜೆ ಸಹಾಯಕರು ಹಾಗೂ ಒಬ್ಬ ಆಯಾ
ಕಾರ್ಯನಿರ್ವಹಿಸುತ್ತಿದ್ದಾರೆ.
2023-24 ನೇ ಸಾಲಿನಲ್ಲಿ 8ನೇ ವರ್ಗದಲ್ಲಿ-88, 9ನೇ ವರ್ಗದಲ್ಲಿ 78, ಹಾಗೂ 10ನೇ ವರ್ಗದಲ್ಲಿ 60 ವಿದ್ಯಾಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

-: ಶಾಲೆಯ ಮುಂದಿನ ಗುರಿಗಳು : –
ಪ್ರೌಢಶಾಲಾ ವಿಭಾಗಕ್ಕೆ ಪ್ರತ್ಯೇಕ ಕಟ್ಟಡ ಹಾಗೂ ಆಟದ ಮೈದಾನ ಹೊಂದುವುದು.
ಪ್ರೌಢಶಾಲೆಯಲ್ಲಿ ಹೆಚ್ಚಿನ ವಿಭಾಗಗಳಿಗಾಗಿ ಅನುಮತಿ ಪಡೆಯುವುದು.
ಮುಧೋಳ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸುವುದು.