Shri Siddeshwara Gnyanashram And Gho Seva Sedana, Satapatanahalli
ಶ್ರೀ ಸಿದ್ದೇಶ್ವರ ಜ್ಞಾನ ಆಶ್ರಮ ಗೋ ಸೇವಾ ಸದನ, ಸಟಪಟ್ನಳ್ಳಿ , ತಾಲೂಕ ಸೇಡಂ ಜಿಲ್ಲೆ ಕಲ್ಬುರ್ಗಿ.
ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಮಕ್ಕಳಿಗೆ ಶಿಕ್ಷಣವನ್ನು ಅಷ್ಟೇ ಅಲ್ಲದೆ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸಮಾಜ ಶೈಕ್ಷಣಿಕ ಧಾರ್ಮಿಕ ಕ್ಷೇತ್ರದಲ್ಲಿ ಸಾಗುತ್ತಿದೆ. ಆರಂಭದಲ್ಲಿ ಶ್ರೀ ಶಿವ ಶರಣಪ್ಪ ಬಿಡಪ್ ಅವರ ಆಶಯದಂತೆ ಆರಂಭಗೊಂಡ ಈ ಗೋಶಾಲೆ. ಶ್ರೀ ಬಸವರಾಜ ಪಾಟೀಲ್ ಸೇಡಂ ಶ್ರೀಮತಿ ಉಷಾ ವಿಜಿ ಶಿವಮೊಗ್ಗ ಇವರ ಮಾರ್ಗದರ್ಶನದಲ್ಲಿ ಶ್ರೀ ಶಿವಾರೆಡ್ಡಿ ಹೂವಿನ ಬಾವಿ ಅವರ ನಿರಂತರ ಗಮನ ನಿಷ್ಠಾವಂತ ಮಲ್ಲೇಶಪ್ಪನವರ ಗೋಪಾಲನೆ ಅದರ ಮೇಲುಸ್ತುವರಿಯ ಜವಾಬ್ದಾರಿಯನ್ನು ಚಂದ್ರಶೇಖರ್ ಬಿಡಪ್ಪರು ಸತ್ತ ಪರಿಣಾಮ 1999ರಲ್ಲಿ ಸಟಪಟ್ನಳ್ಳಿಯ 5 ಎಕರೆ ಬೆರಳೆಣಿಕೆಯ ಗೋವುಗಳಿಂದ ಗೋಶಾಲೆಯನ್ನು ಆರಂಭಿಸಲಾಯಿತು. ಇವತ್ತು ಗೋಶಾಲೆಯಲ್ಲಿ 55 ಗೋಕರು ಆಕಳ ಹೋರಿಗಳನ್ನು ಒಳಗೊಂಡಂತೆ ಪಶುಸಂಪತ್ತು ಅಲ್ಲಿದೆ. ಮುಕ್ಕೋಟಿ ದೇವರುಗಳ ವಾಸವಿದೆ ಎಂದು ಭಾರತೀಯರ ನಂಬಿಕೆ. ಗೋವು ಪೂಜ್ಯನೀಯ ಮಾತ್ರವಲ್ಲದೆ ಕೃಷಿಗೆ ಆದರ ಸ್ತಂಭವು ಹೌದು. ಗೋವಿನಿಂದ ಸಮಾಜಕ್ಕೆ ಅನೇಕ ಉಪಯೋಗಗಳಿವೆ. ಆರೋಗ್ಯಕ್ಕೆ ಗವ್ಯ ಪದಾರ್ಥ ಕೃಷಿಗಾಗಿ ಆರ್ಥಿಕತೆಯ ದೊಡ್ಡ ಕೊಡುಗೆ. ವಿಜ್ಞಾನ ಸಂಶೋಧನೆಗೆ ಆಧ್ಯಾತ್ಮಿಕ ಸಾಧನೆಗೆ ಸಾವಯವ ಕೃಷಿಗಾಗಿ ಸಾವಯವ ಆಹಾರ ಪದ್ಧತಿ, ಅದರಿಂದ ಆಸ್ಪತ್ರೆಯ ಖರ್ಚು ಕಡಿಮೆ ಇತಿಹಾಸದ ಬೆಳಕುಗಳಲ್ಲಿ ಗೋವಿನ ಹೆಜ್ಜೆ ಗುರುತಿರುವಂತಹ ಅನೇಕ ಉಪಯೋಗಗಳು ನಮಗೆ ಗೋ ಮಾತೆಯಿಂದ ಸಿಗುತ್ತವೆ.
ಇಂದು ಗೋಮಾತೆಯ ರಕ್ಷಣೆ ಮತ್ತು ಸಾಗಾಣಿಕೆ ಒಂದು ಸವಾಲೆ ಸರಿ. ಆದರೂ ಸಂಸ್ಥೆ ಅದನ್ನು ನಿಭಾಯಿಸಿಕೊಂಡು ಬರುತ್ತಿದೆ. ಅವುಗಳ ಪಾಲನೆ ಪೋಷಣೆಗಾಗಿ 40X100 ಉದ್ದಳತೆಯ ಸುಸಜ್ಜಿತ ಗೋ ಶಾಲಾ ಕಟ್ಟಡ, ರಸ್ತೆ, ವಿದ್ಯುತ್, ನೀರಿನ ವ್ಯವಸ್ಥೆ ಇದ್ದು, ಮೂರು ಜನ ಗೋ ಸೇವಕರು ಒಬ್ಬ ಪಶು ವೈದ್ಯಾಧಿಕಾರಿ ಅವುಗಳ ಆರೈಕೆಯಲ್ಲಿ ತೊಡಗಿದ್ದಾರೆ. ಸುತ್ತಲಿನ ಆಸಕ್ತ ರೈತರಿಗೆ ಇಲ್ಲಿ ದೊಡ್ಡದಾಗಿರುವ ಹೋರಿಗಳನ್ನು ಒಕ್ಕಲುತನದ ಉಪಯೋಗಕ್ಕಾಗಿ ಮತ್ತು ಆಕಳು ಸಾಕುವವರಿಗೆ ಈ ಗೋಶಾಲೆಯಿಂದ ಹೋರಿ ಆಕಳಗಳನ್ನು ದಾನದ ರೂಪದಲ್ಲಿ ನೀಡಲಾಗುವುದು.
ತಾಲೂಕಿನ ರೈತರು ತಾವು ಬೆಳೆದಂತಹ ಮೇಬನ್ನು ದಾನದ ರೂಪದಲ್ಲಿ ಗೋಶಾಲೆಗೆ ನೀಡಿ ಸಹಕರಿಸುತ್ತಿದ್ದಾರೆ. ಇಲ್ಲಿರುವ ಗೋವುಗಳ ಕುರಿತಾಗಿ ಕೃಷಿಯ ಬಗ್ಗೆ ಪ್ರಯೋಗಿಕವಾಗಿ ಪ್ರಾತ್ಯಕ್ಷಕ್ಕೆ ಮುಖಾಂತರ ಕೃಷಿ ತಜ್ಞರಿಂದ ಆಸಕ್ತ ಮಕ್ಕಳಿಗೆ ಮಾಹಿತಿಯನ್ನು ನೀಡಲಾಗುತ್ತದೆ. ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಸ್ಥಳೀಯರಿಗೆ ಪೂಜಾ ಕಾರ್ಯಗಳನ್ನು ಮತ್ತು ಗೋದರ್ಶನ ಪಡೆಯಲು ದೇವಾಲಯ ಪರಿಸರದಲ್ಲಿ ಐದು ಗೋಗುಗಳಿರುತ್ತವೆ. ಆಕಸ್ಮಿಕವಾಗಿ ಯಾವುದಾದರೂ ಗೋವು ಅದು ಅಸುನೀಗಿದ್ದ ಕಂಡರೆ ಅಂತ ಗೋವುಗಳನ್ನು ಸಂಸ್ಕಾರ ಮಾಡುವ ಜವಾಬ್ದಾರಿ ಗೋಶಾಲೆಯ ಹೊತ್ತುಕೊಂಡಿದೆ.