Select Page

Sri Sharanbasaveshwar Vidya Mandir Higher Primary School, Chincholi 

 ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ಸಂಚಾಲಿತ ಶ್ರೀ ಶರಣಬಸವೇಶ್ವರ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಶಾಲೆ ಚಿಂಚೋಳಿ

 

ಶಾಲೆಯ ಪ್ರಾರಂಭವಾದ ವರ್ಷ: ಶರಣಬಸವೇಶ್ವರ ವಿದ್ಯಾ ಮಂದಿರ್ ಹಿರಿಯ ಪ್ರಾಥಮಿಕ ಶಾಲೆಯು 1983 84ನೇ ಈ ಸಾಲಿನಲ್ಲಿ ಪೂಜ್ಯ ಮಡಿವಾಳಯ್ಯ ಸ್ವಾಮಿಗಳ ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ಪೀಠಾಧಿಪತಿಗಳು ಇವರ ಅಮೃತ ಹಸ್ತದಿಂದ ಪ್ರಾರಂಭವಾಯಿತು.

 1983 84ನೇ ಸಾಲಿನಲ್ಲಿ 9 ಮಕ್ಕಳಿಂದ ಪ್ರಾರಂಭವಾಗಿ ಇಲ್ಲಿಯವರೆಗೆ 3841 ಮಕ್ಕಳು ಅಭ್ಯಾಸ ಮಾಡಿದ್ದಾರೆ. ಅನುದಾನಿತ 11 ಶಿಕ್ಷಕರು, ಗೌರವ ಶಿಕ್ಷಕರಾಗಿ ಸುಮಾರು ನೂರಕ್ಕಿಂತ ಹೆಚ್ಚು ಶಿಕ್ಷಕರು ಸೇವೆ ಸಲ್ಲಿಸಿದ್ದಾರೆ.

ಶಾಲೆಯ ಸಂಕ್ಷಿಪ್ತ ಮಾಹಿತಿ: ನಮ್ಮ ಶಾಲೆಯು ಪ್ರಾರಂಭ ವರ್ಷದಲ್ಲಿ ಚಿಂಚೋಳಿ ಪಟ್ಟಣದಲ್ಲಿ ಪ್ರಾರಂಭವಾಗಿ 2013ರಲ್ಲಿ ಚಿಂಚೋಳಿ ವಾರ್ಡ್ ನಂಬರ್ ಒಂದು ಹೊಸ ಊರು ಭೋಗ ನಿಂಗದಳ್ಳಿ  ರಸ್ತೆ, ಭವಾನಿ ನಗರದಲ್ಲಿ ಸ್ಥಳಾಂತರಗೊಂಡಿತ್ತು. ಶಾಲೆಯು ಸ್ವಂತ ಕಟ್ಟಡ ಹೊಂದಿದೆ, ಶಾಲೆಯಲ್ಲಿ ಆಟದ ಮೈದಾನ, ಹಚ್ಚು ಹಸಿರಿನಿಂದ ತುಂಬಿದ. ಗಿಡಮರಗಳನ್ನು ಹೊಂದಿದೆ. ಶಬ್ದ ಮಾಲಿನ್ಯವನ್ನು ಹೊಂದಿಲ್ಲದ  ಪ್ರದೇಶದಲ್ಲಿ ಶಾಲೆ ಇದೆ. ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಮಾರ್ಟ್ ಕ್ಲಾಸ್ ಕಂಪ್ಯೂಟರ್ ವ್ಯವಸ್ಥೆ ಇದೆ.

 ಉದ್ದೇಶ ಮತ್ತು ಗುರಿ : ಭಾರತ ದೇಶವು ಭವ್ಯ ಸಂಸ್ಕೃತಿಯನ್ನು ಹೊಂದಿದ ದೇಶ ಅದರಂತೆ ನಮ್ಮ ಶಾಲೆಯು ಸಹ ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಂಡು ಮಕ್ಕಳನ್ನು ಸುಸಂಸ್ಕೃತ ವ್ಯಕ್ತಿಗಳನ್ನಾಗಿ ಮಾಡುವುದುಮತ್ತು ನಮ್ಮ ಮಕ್ಕಳು ಪರಿಸರ ಪ್ರೇಮಿಗಳು, ಸ್ವಚ್ಛ ಗ್ರಾಮಗಳ ಕಡೆಗೆ ಜಾಗೃತ ಮಾಡಿಸುವುದು ಸಮಾಜಕ್ಕೆ ಮಕ್ಕಳ ಮುಖಾಂತರ ಅರಿವು ಮೂಡಿಸುವುದು. ಮತ್ತು ನಮ್ಮ ದೇಶಿಯ ಕ್ರೀಡೆಗಳು, ಜಾನಪದ ಕಲೆ, ಹಿರಿಯರಿಗೆ ಅತಿಥಿಗಳಿಗೆ ಗೌರವ ಕೊಡುವುದು ಎಲ್ಲಾ ಧರ್ಮದ ಮಕ್ಕಳು ಸಹೋದರ ಭಾವನೆಯನ್ನು ಮೂಡಿಸುವ ಉದ್ದೇಶ.

 ನಮ್ಮ ಶಾಲೆಯು ಸಮಾಜ ಗುರುತಿಸುವಂತೆ ಕಾಯಕಗಳನ್ನು ಮಾಡುವ ಗುರಿ ಹೊಂದಿದೆ. ನಮ್ಮ ಮಕ್ಕಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಭಾಗವಿಸುವ ಸಂಕಲ್ಪ ನಮ್ಮದಾಗಿದೆ. ಶಾಲೆಯಿಂದಲೇ ಸಮುದಾಯಕ್ಕೆ ಜಾಗೃತಿ ಮೂಡಿಸುವ ಕೆಲಸ ಮಾಡುವುದು.

ವಿದ್ಯಾರ್ಥಿಗಳ ಸಾಧನೆ: ನಮ್ಮ ಶಾಲೆಯ ಮಕ್ಕಳು ವಿದ್ಯಾಭಾರತಿ ಆಯೋಜಿತ ಸಂಸ್ಕೃತ ಜ್ಞಾನ ರಸಪ್ರಶ್ನೆ ವೇದಗಣಿತ ರಸಪ್ರಶ್ನೆಯಲ್ಲಿ ಪ್ರಾಂತ ಕ್ಷೇತ್ರ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಇಲಾಖೆಯಿಂದ ಆಯೋಜಿತ ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟದವರೆಗೂ ಭಾಗವಹಿಸಿದ್ದಾರೆ.