ಅಕ್ಷರಭ್ಯಾಸ
ಪೂಜ್ಯಶ್ರೀ ಸದಾಶಿವ ದೇವರು ಇವರ ಅಮೃತ ಹಸ್ತದಿಂದ ಪಾಟಿ ಪೂಜೆ ಹಾಗೂ ಅಕ್ಷರಭ್ಯಾಸ .
ಶಿಶು ಶಿಕ್ಷಣದ ಬಗ್ಗೆ ವಿಶೇಷತೆ ಚಟುವಟಿಕೆ ಆಧಾರಿತ ಆಟದೊಂದಿಗೆ ಪಾಠ ಮಾಡಲಾಗುತ್ತದೆ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಜೂನ್ ಎರಡನೇ ವಾರದಂದು ಮಕ್ಕಳಿಗೆ ಸರಸ್ವತಿ ಮಂದಿರಕ್ಕೆ ಕರೆದುಕೊಂಡು ಹೋಗಿ ದರ್ಶನ ಪಡೆದುಕೊಂಡು ಬಂದು ವರ್ಗಗಳು ಪ್ರಾರಂಭ ಮಾಡುತ್ತೇವೆ, ಮಣ್ಣೆತ್ತಿನ ಅಮಾವಾಸ್ಯೆಯ ದಿನದಂದು ಮಕ್ಕಳ ಕೈಯಿಂದ ಎತ್ತುಗಳು ಮಾಡಿ ಎತ್ತುಗಳಿಂದ ಆಗುವ ಉಪಯೋಗ ಹೇಳಲಾಗುತ್ತದೆ. ಪ್ರತಿ ವರ್ಷ ಪೂಜ್ಯಶ್ರೀ ಸದಾಶಿವ ದೇವರು ಇವರ ಅಮೃತ ಹಸ್ತದಿಂದ ಪಾಟಿ ಪೂಜೆ ಹಾಗೂ ಅಕ್ಷರಭ್ಯಾಸ ಮಾಡಿಸಲಾಗುವುದು. ಆಯಾ ತಿಂಗಳಲ್ಲಿ ಹುಟ್ಟಿದ ಎಲ್ಲಾ ಮಕ್ಕಳ ಹುಟ್ಟುಹಬ್ಬವನ್ನು ತಿಂಗಳ ಕೊನೆಯಲ್ಲಿ ಆಚರಿಸು ಆಚರಿಸುತ್ತೇವೆ ಆ ದಿನ ಪ್ರಾರ್ಥನೆಗೆ ಮಕ್ಕಳ ಪಾಲಕರಿಗೂ ಮತ್ತು ಮಾತೆಯರಿಗೂ ಉಪಸ್ಥಿತಿ ಇರಲು ಹೇಳುತ್ತೇವೆ ಹಾಗೂ ಅವರನ್ನ ನೇತೃತ್ವದಲ್ಲಿ ಪ್ರಾರ್ಥನೆ ಮತ್ತು ಹುಟ್ಟುಹಬ್ಬವನ್ನು ಆಚರಿಸುತ್ತೇವೆ. ಹುಟ್ಟು ಹಬ್ಬದ ದಿನದಂದು ಮಕ್ಕಳಿಗೆ ಪೌಷ್ಟಿಕ ಆಹಾರ ಮೊಳಕೆ ಕಾಳು ಹಾಗೂ ಮನೆಯಲ್ಲಿ ತಯಾರಿಸಿದ ಸಿಹಿ ವಿತರಣೆ ಮಾಡುತ್ತೇವೆ ಹಾಗೆ ಮಕ್ಕಳ ಕೈಯಿಂದ ಸಸಿ ಹಾಗೂ ಗಿಡಗಳನ್ನು ಹಚ್ಚಿಸುತ್ತೇವೆ ವರ್ಷದಲ್ಲಿ ಎರಡು ಬಾರಿ ಮಾತ್ರ ಮಿಲನ ಕಾರ್ಯಕ್ರಮ ಮಾಡುತ್ತೇವೆ ಹಾಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಸ್ಥಳೀಯ ಎಲ್ಲಾ ಶಾಲೆಗಳಿಂದ ಐದು ಮಕ್ಕಳನ್ನು ಕರೆಯಿಸಿ ತುಳಜಾಭವಾನಿ ಶಿಶುಮಂದಿರದ ಎಲ್ಲಾ ಮಕ್ಕಳು ಶ್ರೀ ಕೃಷ್ಣನ ವೇಷಧರಿಸಿಕೊಂಡು ತುಂಬಾ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ಆಚರಿಸುತ್ತೇವೆ. ಹಾಗೆ ಪ್ರತಿಯೊಂದು ಮಗು ಸಂಸ್ಕೃತದಲ್ಲಿ ಶ್ಲೋಕ ವಚನ ಗಾದೆ ಮಾತುಗಳು ಅಮೃತಬಿಂದು ನೀತಿ ಕಥೆಗಳು ಮನಮುಟ್ಟುವಂತೆ ಹೇಳುತ್ತೇವೆ. ಮಕ್ಕಳು ಕೂಡ ಅರಳು ಹುರಿದಂತೆ ಹೇಳುತ್ತಾರೆ,
ಪ್ರತಿ ವರ್ಷ ದ ಕೊನೆ ಹಂತದಲ್ಲಿ ಮಕ್ಕಳಿಗೆ ಬಿಳ್ಕೊಡುಗೆ ಮಾಡಿ ಮಾತೆಯರಿಂದ ಕೈತುತ್ತಿನ ಊಟ ಮಾಡಿಸುತ್ತಾರೆ.
ಮುಖ್ಯಗುರುಗಳ ನುಡಿ
” ಆಟ ಪಾಠಗಳೊಂದಿಗೆ ಸಂಸ್ಕಾರವನ್ನು ಬೆಳಸಿ ಭವಿಷ್ಯ ನಿರ್ಮಿಸುವುದು”
– ಶ್ರೀಮತಿ ವಿಜಯಲಕ್ಷ್ಮಿ ಪಾಗ
Students
Faculty
Years Established
Get In Touch
Address: Matruchaya Campus Sedam
Telephone:
School Hours: M-S: 10:00am – 3:10pm